Sunday, April 2, 2023
Google search engine
HomeUncategorizedವಧುವಿನ ಅದ್ಧೂರಿ ಎಂಟ್ರಿಗೆ ಬಳಸಿದ್ದ ಹೆಲಿಕಾಪ್ಟರ್ ಸುಟ್ಟು ಕರಕಲು: ಮುಂದೆ ಆಗಿದ್ದೇನು….?

ವಧುವಿನ ಅದ್ಧೂರಿ ಎಂಟ್ರಿಗೆ ಬಳಸಿದ್ದ ಹೆಲಿಕಾಪ್ಟರ್ ಸುಟ್ಟು ಕರಕಲು: ಮುಂದೆ ಆಗಿದ್ದೇನು….?

ವಧುವಿನ ಅದ್ಧೂರಿ ಎಂಟ್ರಿಗೆ ಬಳಸಿದ್ದ ಹೆಲಿಕಾಪ್ಟರ್ ಸುಟ್ಟು ಕರಕಲು: ಮುಂದೆ ಆಗಿದ್ದೇನು….?

ನವದೆಹಲಿ: ಮದುವೆಯನ್ನು ಎಲ್ಲರಿಗಿಂತಲೂ ಭಿನ್ನವಾಗಿ ಮಾಡಬೇಕು ಎಂದು ಹವಣಿಸುವ ಹಲವಾರು ಕುಟುಂಬಗಳಿವೆ. ತಮ್ಮ ಯೋಗ್ಯತೆ, ಶ್ರೀಮಂತಿಕೆಗೆ ತಕ್ಕಂತೆ ಇದು ಬದಲಾಗುತ್ತದೆ. ಮದುವೆಯ ದಿನ ಅದ್ಧೂರಿ ಎಂಟ್ರಿ ಕೊಡಲು ಹೆಲಿಕಾಪ್ಟರ್​ನಲ್ಲಿ ಬರುವುದು ಇತ್ತೀಚೆಗೆ ಟ್ರೆಂಡ್​ ಆಗಿಬಿಟ್ಟಿದೆ.

ಇಂಥದ್ದೇ ಒಂದು ಎಂಟ್ರಿ ಕೊಡಲು ಹೋದ ಹೆಲಿಕಾಪ್ಟರ್​ ಒಂದು ಅಪಘಾತಕ್ಕೀಡಾಗಿ ಸುಟ್ಟು ಭಸ್ಮವಾಗಿದೆ. ​ದೆಹಲಿಯಲ್ಲಿ ನಡೆದ ಈ ಘಟನೆಯಲ್ಲಿ ವಧು ಬೆಂಕಿಗೆ ಆಹುತಿಯಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಆದರೆ ಫ್ಯಾಕ್ಟ್​ ಚೆಕ್​ ಮಾಡಿದಾಗ ವಧುವಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

ಹೆಲಿಕಾಪ್ಟರ್​ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿರುವ ಪರಿ ನೋಡಿದರೆ ಅದರಲ್ಲಿ ಇರುವವರು ಯಾರೊಬ್ಬರೂ ಬದುಕಿರುವ ಸಾಧ್ಯತೆ ಇಲ್ಲ, ಪೈಲೆಟ್​ ಮತ್ತು ವಧು ಬೆಂಕಿಗೆ ಆಹುತಿಯಾಗಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಅಸಲಿಗೆ ಅದೃಷ್ಟವಶಾತ್​ ಇಬ್ಬರಿಗೂ ಯಾವುದೇ ಹಾನಿಯಾಗಿಲ್ಲ.ಮದುವೆ ನಿಗದಿಯಂತೆ ನಡೆದಿದೆ ಎಂದು ವರದಿಯಾಗಿದೆ.

ಈ ವಿಡಿಯೋವನ್ನು ಹಂಚಿಕೊಂಡಿದ್ದ  ಟ್ವಿಟ್ಟರ್‌ ಬಳಕೆದಾರರೊಬ್ಬರು, “ವಧು ಐಷಾರಾಮಿ ಮದುವೆಯ ಹೆಲಿಕಾಪ್ಟರ್‌ನಲ್ಲಿ ಬಂದು ಇಳಿಯಬೇಕು ಎಂದುಕೊಂಡರೆ, ಎಲ್ಲಾ ಕನಸುಗಳು ಕ್ಷಣದಲ್ಲಿ ಮಾಯವಾಗುತ್ತವೆ. ಪಾಲಕರು ಈ ಸಾವನ್ನು ಅಸಹಾಯಕರಾಗಿ ನೋಡುತ್ತಾರೆ. ಇಂಥ ಐಷಾರಾಮಿ ಮದುವೆಗೆ ಕಡಿವಾಣ ಹಾಕಿ’ ಎಂದು ಬರೆಯಲಾಗಿದ್ದು, ಇದು ಭಾರಿ ವೈರಲ್​ ಆಗಿತ್ತು. ಆದರೆ ಘಟನೆಯಲ್ಲಿ ಯಾರಿಗೂ ಪ್ರಾಣಹಾನಿಯಾಗಿಲ್ಲ ಎಂದು ಇಂಡಿಯಾ ಟುಡೇ ಪತ್ರಿಕೆ ವರದಿ ಮಾಡಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments