ರೈಲಿನಲ್ಲಿ ಸಿಗರೇಟ್ ಸೇದುತ್ತಿದ್ದ ಹುಡುಗಿ ಫೋಟೋ ಟ್ವೀಟ್; ಮುಖ ಮರೆಮಾಚದ್ದಕ್ಕೆ ನೆಟ್ಟಿಗರ ಕ್ಲಾಸ್

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ಖಂಡಿತವಾಗಿಯೂ ಅಪರಾಧ. ಆದರೆ ಆಕೆಯ ಅನುಮತಿ ಪಡೆಯದೆ ನೀವು ಫೋಟೋ ತೆಗೆದಿರುವುದು ತಪ್ಪು ಎಂದಿರುವ ಕೆಲವರು, ಇದೇ ಕೆಲಸವನ್ನು ಪುರುಷ ಮಾಡುತ್ತಿದ್ದರೆ ಇಂತಹ ಧೈರ್ಯ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಮತ್ತೆ ಕೆಲವರು, ಆಕೆ ಸಿಗರೇಟ್ ಸೇದುತ್ತಿರುವುದಕ್ಕೂ ಆಧುನಿಕ ಮನೋಭಾವಕ್ಕೂ ಥಳಕು ಹಾಕುವುದು ಎಷ್ಟು ಸರಿ. ಆಕೆ ರೈಲಿನಲ್ಲಿ ಸಿಗರೇಟ್ ಸೇದುವ ಮೂಲಕ ತಪ್ಪು ಮಾಡಿರೋದು ನಿಜ. ಆದರೆ ನೀವು ಆಕೆಯ ಮುಖವನ್ನು ಮರೆಮಾಚದೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದು ಸಮಂಜಸವೇ ಎಂದಿದ್ದಾರೆ.
ಮತ್ತಷ್ಟು ಮಂದಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಟ್ವೀಟ್ ಮಾಡಿದ್ದ ಸಿ.ಜೆ. ಭವು ಅವರ ಸಾಮಾಜಿಕ ಜಾಲತಾಣದ ಹಲವು ಫೋಟೋಗಳನ್ನು ಕೆದಕಿದ್ದಾರೆ. ಇದರಲ್ಲಿ ಅವರು ಸಿಗರೇಟ್ ಸೇದುವ ಫೋಟೋ ಸಹ ಇದ್ದು, ಅದನ್ನು ಹಾಕುವ ಮೂಲಕ ತಿರುಗೇಟು ನೀಡಿದ್ದಾರೆ.