Tuesday, September 27, 2022
Google search engine
HomeUncategorizedರೆಬೆಲ್‌ ಸ್ಟಾರ್ ಅಂಬರೀಷ್‌ ಅವರ ಮೊದಲ ಚಿತ್ರ ʼನಾಗರಹಾವುʼ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್ ವಿಚಾರ

ರೆಬೆಲ್‌ ಸ್ಟಾರ್ ಅಂಬರೀಷ್‌ ಅವರ ಮೊದಲ ಚಿತ್ರ ʼನಾಗರಹಾವುʼ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್ ವಿಚಾರ

ರೆಬೆಲ್‌ ಸ್ಟಾರ್ ಅಂಬರೀಷ್‌ ಅವರ ಮೊದಲ ಚಿತ್ರ ʼನಾಗರಹಾವುʼ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್ ವಿಚಾರ

ಕನ್ನಡ ಚಿತ್ರರಂಗದ ಖ್ಯಾತ ನಟ ರೆಬೆಲ್ ಸ್ಟಾರ್ ಅಂಬರೀಷ್ ಇಹಲೋಕ ತ್ಯಜಿಸಿದ್ದರೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ‘ನಾಗರಹಾವು’ ಚಿತ್ರದ ಪುಟ್ಟ ಪಾತ್ರ ‘ಜಲೀಲ’ನ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

ಈ ಚಿತ್ರದಲ್ಲಿ ಕೆಲವೇ ಕ್ಷಣಗಳಲ್ಲಿ ಬಂದು ಹೋಗುವ ಅಂಬರೀಶ್, ತಮ್ಮ ವಿಶಿಷ್ಟ ಮ್ಯಾನರಿಸಂ ಹಾಗೂ ಅಭಿನಯದ ಕಾರಣಕ್ಕಾಗಿ ಜನಮಾನಸದಲ್ಲಿ ಉಳಿದುಕೊಂಡಿದ್ದರು.

ಈ ಪಾತ್ರಕ್ಕೆ ತಮ್ಮನ್ನು ಪುಟ್ಟಣ್ಣ ಕಣಗಾಲ್ ಆಯ್ಕೆ ಮಾಡಿದ ವೇಳೆ, ಅಂಬರೀಶ್, ನೇರವಾಗಿ ತಮಗೆ ಅಭಿನಯದ ಗಂಧಗಾಳಿಯೂ ಗೊತ್ತಿಲ್ಲ. ನೀವು ಏನು ಹೇಳಿ ಕೊಡುತ್ತಿರೋ ಅದನ್ನು ಮಾಡುತ್ತೇನೆ ಎಂದು ಹೇಳಿದ್ದರಂತೆ.

ಅಚ್ಚರಿಯ ಸಂಗತಿ ಎಂದರೆ ಈ ಚಿತ್ರದ ನಾಯಕಿ ಪಾತ್ರಧಾರಿಯಾಗಿದ್ದ ಆರತಿ ಹಾಗೂ ಅಂಬರೀಶ್ ಮೈಸೂರಿನ ಕಾಲೇಜಿನಲ್ಲಿ ಒಟ್ಟಿಗೆ ವ್ಯಾಸಂಗ ಮಾಡುತ್ತಿದ್ದರಂತೆ. ಆಗಲೇ ಆರತಿಯವರನ್ನು ಗೊತ್ತಿಲ್ಲದೆ ಚುಡಾಯಿಸಿದ್ದ ಅಂಬರೀಶ್, ಅದೇ ಪಾತ್ರವನ್ನು ‘ನಾಗರಹಾವು’ ಚಿತ್ರದಲ್ಲಿ ನಿರ್ವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments