Sunday, September 25, 2022
Google search engine
HomeUncategorizedರಾತ್ರೋರಾತ್ರಿ ಕಿಟಕಿ ರಾಡ್ ಮುರಿದು ಹಾಸ್ಟೆಲ್ ನಿಂದ ಪರಾರಿಯಾದ ವಿದ್ಯಾರ್ಥಿನಿಯರು

ರಾತ್ರೋರಾತ್ರಿ ಕಿಟಕಿ ರಾಡ್ ಮುರಿದು ಹಾಸ್ಟೆಲ್ ನಿಂದ ಪರಾರಿಯಾದ ವಿದ್ಯಾರ್ಥಿನಿಯರು

ರಾತ್ರೋರಾತ್ರಿ ಕಿಟಕಿ ರಾಡ್ ಮುರಿದು ಹಾಸ್ಟೆಲ್ ನಿಂದ ಪರಾರಿಯಾದ ವಿದ್ಯಾರ್ಥಿನಿಯರು

ಮಂಗಳೂರು: ರಾತ್ರೋರಾತ್ರಿ ಮೂವರು ವಿದ್ಯಾರ್ಥಿನಿಯರು ಕಿಟಕಿ ರಾಡ್ ಮುರಿದು ಹಾಸ್ಟೆಲ್ ನಿಂದ ಪರಾರಿಯಾದ ಘಟನೆ ಮಂಗಳವಾರ ನಡೆದಿದೆ.

ಮಂಗಳೂರಿನ ಮೇರಿ ಹಿಲ್ ಸಮೀಪದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಮೂವರು ವಿದ್ಯಾರ್ಥಿನಿಯರು ಹಾಸ್ಟೆಲ್ ನಿಂದ ಪರಾರಿಯಾಗಿದ್ದಾರೆ. ಇಬ್ಬರು ಬೆಂಗಳೂರಿನವರಾಗಿದ್ದು, ಮತ್ತೊಬ್ಬ ವಿದ್ಯಾರ್ಥಿನಿ ಚಿಕ್ಕಮಗಳೂರು ಜಿಲ್ಲೆಯವರು. ಕಾಲೇಜು ಅವರಣದಲ್ಲೇ ಇರುವ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿಯರು ವಾಸವಾಗಿದ್ದು, ಮಂಗಳವಾರ ರಾತ್ರೋರಾತ್ರಿ ಕಿಟಕಿ ರಾಡ್ ಮುರಿದು ಪರಾರಿಯಾಗಿದ್ದಾರೆ.

ಈ ವಿಷಯ ಬೆಳಗ್ಗೆ ಸ್ನೇಹಿತೆಯರ ಗಮನಕ್ಕೆ ಬಂದಿದ್ದು, ವಾರ್ಡನ್ ಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿನಿಯರೇ ಕಿಟಕಿ ರಾಡ್ ಮುರಿದು ನಾಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ವಿದ್ಯಾರ್ಥಿನಿಯರು ಬೆಳಗಿನ ಜಾವ ಮೂರು ಗಂಟೆಗೆ ಬ್ಯಾಗ್ ಸಹಿತ ಹಾಸ್ಟೆಲ್ ನಿಂದ ಹೊರ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments