Saturday, September 24, 2022
Google search engine
HomeUncategorizedರಾಣಿ ಎಲಿಜಬೆತ್​ ಶವಪೆಟ್ಟಿಗೆ ಮಧ್ಯಾಹ್ನ 2-22 ಕ್ಕೆ ಅರಮನೆಯಿಂದ ಹೊರಟಿದ್ದರ ಹಿಂದಿದೆಯಂತೆ ಈ ಕಾರಣ…!

ರಾಣಿ ಎಲಿಜಬೆತ್​ ಶವಪೆಟ್ಟಿಗೆ ಮಧ್ಯಾಹ್ನ 2-22 ಕ್ಕೆ ಅರಮನೆಯಿಂದ ಹೊರಟಿದ್ದರ ಹಿಂದಿದೆಯಂತೆ ಈ ಕಾರಣ…!

ರಾಣಿ ಎಲಿಜಬೆತ್​ ಶವಪೆಟ್ಟಿಗೆ ಮಧ್ಯಾಹ್ನ 2-22 ಕ್ಕೆ ಅರಮನೆಯಿಂದ ಹೊರಟಿದ್ದರ ಹಿಂದಿದೆಯಂತೆ ಈ ಕಾರಣ…!

ರಾಣಿ ಎಲಿಜಬೆತ್ ನಿಧನದಿಂದ​ ಬ್ರಿಟನ್​ ಶೋಕ ಸಾಗರದಲ್ಲಿ ಮುಳುಗಿದ್ದು, ಅಂತಿಮ ವಿಧಿವಿಧಾನಗಳು ಆರಂಭವಾಗಿದೆ.

ಬುಧವಾರ ಮಧ್ಯಾಹ್ನ 2-22 ಕ್ಕೆ ಜನ ಪ್ರವಾಹದ ನಡುವೆ ರಾಣಿ ಎಲಿಜಬೆತ್​2 ಅವರ ಪಾರ್ಥಿವ ಶರೀರದ ಕಾಫಿನ್​ (ಶವಪೆಟ್ಟಿಗೆ) ಅನ್ನು ಬಕಿಂಗ್ ​ಹ್ಯಾಮ್​ ಅರಮನೆಯಿಂದ ಹೊರಟಿತು.

ಅರಮನೆಯಿಂದ ಹೊರಡುವ ಸಮಯವು ಒಂದು ನಿಮಿಷ ಆಚೀಚೆ ಆಗಲಿಲ್ಲ, ರಾಣಿಯ ಪಾರ್ಥಿವ ಶರೀರದ ಅಂತಿಮ ಯಾತ್ರೆ ನಿಖರವಾಗಿ ಮಧ್ಯಾಹ್ನ 2:22ಕ್ಕೆ ಹೊರಟಿತು. ಇದೇ ಸಮಯಕ್ಕೆ ಏಕೆ ಎಂಬ ಕುತೂಹಲ ಅನೇಕರಲ್ಲಿದೆ.

ಬಕಿಂಗ್ಹ್ಯಾಮ್​ ಅರಮನೆಯು ವೆಸ್ಟ್​ಮಿನಿಸ್ಟರ್​ ಹಾಲ್​ಗೆ ಹೊರಡಲು ನಿರ್ದಿಷ್ಟ ಸಮಯವನ್ನು ಆಯ್ಕೆಮಾಡುವುದರ ಹಿಂದೆ ಯಾವುದೇ ಸ್ಪಷ್ಟ ಕಾರಣವನ್ನು ದೃಢಪಡಿಸದಿದ್ದರೂ, ಸ್ಥಳೀಯ ಮಾಧ್ಯಮ ವರದಿಯು ರಾಣಿ ಎಲಿಜಬೆತ್​2 ಅವರ ತಂದೆ ಕಿಂಗ್​ ಜಾರ್ಜ್​ಗೆ ಗೌರವ ಸಲ್ಲಿಸಲು ಇರಬಹುದೆಂದು ಉಲ್ಲೇಖಿಸಿದೆ.

ಕಿಂಗ್​ ಜಾರ್ಜ್​1 ಅವರ ಮರಣದ ನಂತರ, ವೆಸ್ಟ್​ಮಿನ್​ಸ್ಟರ್​ನಲ್ಲಿ ಗಂಟೆಗಳು ಧ್ವನಿಸಿದವು ಮತ್ತು ರಾಜರು ಸತ್ತಾಗ ಮಾತ್ರ ಬಾರಿಸುವ ಸೆಬಾಸ್ಟೊಪೋಲ್​ ಬೆಲ್​ 56 ಬಾರಿ ಮೊಳಗಿತ್ತು. ಅವರ ಜೀವನ ಪ್ರತಿ ವರ್ಷಕ್ಕೆ ಒಂದು ಬೆಲ್​ ಲೆಕ್ಕದಲ್ಲಿ 56 ಬಾರಿ ಮೊಳಗಿಸಲಾಗಿತ್ತು. ಸರಿಯಾಗಿ ಮಧ್ಯಾಹ್ನ 2:22ಕ್ಕೆ ಗಂಟೆಗಳು ಮೊಳಗುವುದನ್ನು ನಿಲ್ಲಿಸಿದ್ದವು.

ಈ ಸಮಯದ ಹಿಂದಿನ ಮತ್ತೊಂದು ಸಂಭವನೀಯ ಕಾರಣವೆಂದರೆ ಫೆಬ್ರವರಿಯಲ್ಲಿ ಆಚರಿಸಲಾದ ರಾಜನ ಪ್ಲಾಟಿನಂ ಜುಬಿಲಿಯೊಂದಿಗೆ ಸಂಪರ್ಕವಿರಬಹುದು ಎಂದು ಊಹಿಸಲಾಗಿದೆ.

ರಾಜಮನೆತನದ ಬಯೋಗ್ರಾಫರ್​ ರಾರ್ಬಟ್​ ಲೇಸಿ ಸಮಯದ ಬಗ್ಗೆ ಯಾವುದೆ ಖಚಿತತೆ ಇಲ್ಲ ಎಂದಿದ್ದಾರೆ. ಶವಪೆಟ್ಟಿಗೆಯು ಮಧ್ಯಾಹ್ನ 3 ಗಂಟೆಗೆ ವೆಸ್ಟ್​ಮಿನಿಸ್ಟರ್​ ಹಾಲ್​ಗೆ ತರುವುದನ್ನು ಖಚಿತಪಡಿಸಿಕೊಳ್ಳಲು ಮಧ್ಯಾಹ್ನ 2:22 ಕ್ಕೆ ಅರಮನೆಯಿಂದ ಹೊರಟಿತು ಎಂದಿದ್ದಾರೆ.

ಕೆಲವು ಕ್ರೈಸ್ತರಿಗೆ 222 ಸಂಖ್ಯೆಯು ವಿಶೇಷ ಸ್ಥಾನವನ್ನು ಹೊಂದಿದೆ. ಏಕೆಂದರೆ ಇದು ಏಕತೆ, ಪ್ರೀತಿ ಮತ್ತು ದೇವರೊಂದಿಗಿನ ವೈಯಕ್ತಿಕ ಸಂಬಂಧವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ಜೀಸಸ್​ ಸಹ ಮಧ್ಯಾಹ್ನ 3 ಗಂಟೆಗೆ ಶಿಲುಬೆಯ ಮೇಲೆ ನಿಧನರಾದರು ಎಂದು ನಂಬಲಾಗಿದೆ.

ರಾಣಿ ಎಲಿಜಬೆತ್​ 2ರ ಅಂತ್ಯಕ್ರಿಯೆ ಸೆಪ್ಟೆಂಬರ್​ 19ರ ಸೋಮವಾರದಂದು ನೆರವೇರಲಿದ್ದು, ಅಲ್ಲಿವರೆಗೂ ವೆಸ್ಟ್​ಮಿನಿಸ್ಟರ್​ ಹಾಲ್​ನಲ್ಲಿ ಸಾರ್ವಜನಿಕರಿಗೆ ಅಂತಿಮ ಗೌರವ ಸಲ್ಲಿಸಲು ಅವಕಾಶವಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments