Thursday, August 11, 2022
Google search engine
HomeUncategorizedರಾಖಿ ಕಳುಹಿಸುವವರಿಗೆ ಸಿಹಿ ಸುದ್ದಿ: ಅಂಚೆ ಇಲಾಖೆ ‘ರಾಖಿ ಪೋಸ್ಟ್’ ಸೌಲಭ್ಯ

ರಾಖಿ ಕಳುಹಿಸುವವರಿಗೆ ಸಿಹಿ ಸುದ್ದಿ: ಅಂಚೆ ಇಲಾಖೆ ‘ರಾಖಿ ಪೋಸ್ಟ್’ ಸೌಲಭ್ಯ

ರಾಖಿ ಕಳುಹಿಸುವವರಿಗೆ ಸಿಹಿ ಸುದ್ದಿ: ಅಂಚೆ ಇಲಾಖೆ ‘ರಾಖಿ ಪೋಸ್ಟ್’ ಸೌಲಭ್ಯ

ಬೆಂಗಳೂರು: ಆಗಸ್ಟ್ 11 ರಂದು ರಕ್ಷಾಬಂಧನ ಹಬ್ಬವಿದ್ದು, ಈ ವರ್ಷ ರಕ್ಷಾಬಂಧನದ ಅಂಗವಾಗಿ ಅಂಚೆ ಇಲಾಖೆಯಿಂದ ‘ರಾಖಿ ಪೋಸ್ಟ್’ ವಿಶೇಷ ಸೌಲಭ್ಯ ಪರಿಚಯಿಸಲಾಗಿದೆ.

ಸಹೋದರಿಯರು ಆನ್ಲೈನ್ ನಲ್ಲಿ ರಾಖಿ ಬುಕ್ ಮಾಡಿ ರಾಖಿಯೊಂದಿಗೆ ಶುಭಾಶಯಗಳನ್ನು ಕಳುಹಿಸುವ ಅವಕಾಶವನ್ನು ಕರ್ನಾಟಕ ಅಂಚೆ ವಿಭಾಗ ಕಲ್ಪಿಸಿದೆ. ಅಂಚೆ ಇಲಾಖೆಯ ವೆಬ್ಸೈಟ್ ನಲ್ಲಿ ವಿವಿಧ ವಿನ್ಯಾಸದ ರಾಖಿಗಳು ಲಭ್ಯವಿವೆ. ತಮಗೆ ಬೇಕಾದ ರಾಖಿಯನ್ನು ಕ್ಲಿಕ್ ಮಾಡಿ ಅದಕ್ಕೆ ಸರಿಹೊಂದುವ ಗ್ರೀಟಿಂಗ್ ಕಾರ್ಡ್ ಗಳನ್ನು ಆನ್ಲೈನ್ ನಲ್ಲಿ ಆಯ್ಕೆ ಮಾಡಬಹುದು. ಇದಕ್ಕಾಗಿ 120 ರೂ. ದರ ನಿಗದಿಪಡಿಸಲಾಗಿದೆ ಸೈನಿಕರಿಗೆ ರಾಖಿ ಕಳುಹಿಸುವವರು ಸೈನಿಕರಿಗೆ ಸಂದೇಶ ಕ್ಲಿಕ್ ಮಾಡುವ ಮೂಲಕ ಸೈನಿಕರಿಗೆ ರಾಖಿ ಕಳುಹಿಸಬಹುದು. ಆಸಕ್ತರು https://www.Karnataka post.gov.in/rakhipost ವೆಬ್ಸೈಟ್ ಗಮನಿಸಬಹುದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments