Monday, December 5, 2022
Google search engine
HomeUncategorizedರಬ್ಬರ್​ ಷೀಟ್​ ಕಳ್ಳತನ ಮಾಡಿ ತಲೆಮರೆಸಿಕೊಂಡಾತ 37 ವರ್ಷಗಳ ಬಳಿಕ ಸಿಕ್ಕಿಬಿದ್ದ…..!

ರಬ್ಬರ್​ ಷೀಟ್​ ಕಳ್ಳತನ ಮಾಡಿ ತಲೆಮರೆಸಿಕೊಂಡಾತ 37 ವರ್ಷಗಳ ಬಳಿಕ ಸಿಕ್ಕಿಬಿದ್ದ…..!

ರಬ್ಬರ್​ ಷೀಟ್​ ಕಳ್ಳತನ ಮಾಡಿ ತಲೆಮರೆಸಿಕೊಂಡಾತ 37 ವರ್ಷಗಳ ಬಳಿಕ ಸಿಕ್ಕಿಬಿದ್ದ…..!

ತಿರುವನಂತಪುರ (ಕೇರಳ): ರಬ್ಬರ್ ಷೀಟ್​ ಒಂದನ್ನು ಕದ್ದು ಪರಾರಿಯಾಗಿದ್ದ ಕಳ್ಳನೊಬ್ಬ 37 ವರ್ಷಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ರೋಚಕ ಘಟನೆ ಕೇರಳದಲ್ಲಿ ನಡೆದಿದೆ.

ದಕ್ಷಿಣ ಕೇರಳ ಜಿಲ್ಲೆಯ ವೆಚೂಚಿರಾ ಗ್ರಾಮದ ಆರೋಪಿ ಪೊಡಿಯನ್​ನನ್ನು 37 ವರ್ಷದ ಬಳಿಕ ಪೊಲೀಸರು ಬಂಧಿಸಿದ್ದಾರೆ. ಈತ ಕಳವು ಮಾಡಿದ ಬಳಿಕ ಸಮೀಪದ ಅರಣ್ಯ ಪ್ರದೇಶದಲ್ಲಿ ತಲೆ ಮರೆಸಿಕೊಂಡಿದ್ದ.

1985 ರಲ್ಲಿ ನಡೆದ ಘಟನೆಯ ನಂತರ ತಲೆಮರೆಸಿಕೊಂಡಿದ್ದ ಆರೋಪಿ ಎಲ್ಲಿದ್ದಾನೆಂದು ಗ್ರಾಮಸ್ಥರಿಗೆ ತಿಳಿದಿರಲಿಲ್ಲ. ಮೊಬೈಲ್ ಫೋನ್ ಅಥವಾ ಇತರ ಯಾವುದೇ ಸಂಪರ್ಕ ಸೌಲಭ್ಯಗಳಿಲ್ಲದ ಕಾರಣ, ಆತನ ಸಂಬಂಧಿಕರಿಗೂ ಈತ ಸಿಕ್ಕಿರಲಿಲ್ಲ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

ಕಳ್ಳತನದ ಬಳಿಕ ಇಲ್ಲಿನ ಪೋತುಪಾರ ಅರಣ್ಯದಲ್ಲಿ ತಲೆಮರೆಸಿಕೊಂಡಿದ್ದ. ಸುಳಿವಿನ ಮೇರೆಗೆ ವೆಚೂಚಿರಾ ಪೊಲೀಸ್ ಠಾಣೆಯ ತಂಡ ಆತನನ್ನು ಬಂಧಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments