Thursday, August 11, 2022
Google search engine
HomeUncategorizedಯೂಟ್ಯೂಬ್ ನೋಡಿ ಭತ್ತ ನಾಟಿ ಯಂತ್ರ ಕಂಡು ಹಿಡಿದ ಯುವ ರೈತ !

ಯೂಟ್ಯೂಬ್ ನೋಡಿ ಭತ್ತ ನಾಟಿ ಯಂತ್ರ ಕಂಡು ಹಿಡಿದ ಯುವ ರೈತ !

ಯೂಟ್ಯೂಬ್ ನೋಡಿ ಭತ್ತ ನಾಟಿ ಯಂತ್ರ ಕಂಡು ಹಿಡಿದ ಯುವ ರೈತ !

ಐಟಿಐ ಪಾಸಾದ ಯುವ ರೈತನೊಬ್ಬ ಯೂಟ್ಯೂಬ್​ ನೋಡಿ ಭತ್ತ ನಾಟಿ ಯಂತ್ರ ಸಿದ್ಧಪಡಿಸಿ ದೇಶದ ಗಮನ ಸೆಳೆದಿದ್ದಾನೆ.

ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಭಿಕ್ನೂರ್​ ಮಂಡಲದ ಕಚಾಪುರ ಗ್ರಾಮದವರಾದ ಕಮ್ಮರಿ ನಾಗಸ್ವಾಮಿ ಐಟಿಐ ವ್ಯಾಸಂಗ ಮುಗಿಸಿ ಹೈದರಾಬಾದ್​ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಮೂಲಕ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದರು. ಆದರೆ ಕೋವಿಡ್​ ಸಾಂಕ್ರಾಮಿಕವು ನಾಗಸ್ವಾಮಿಯ ಕೆಲಸ ಕಳೆಯಿತು.

ಕೆಲಸವಿಲ್ಲದೆ ಆತ ತಮ್ಮ ಸ್ವಂತ ಗ್ರಾಮಕ್ಕೆ ವಾಪಸಾಗಿ ತಮ್ಮ ಒಂದು ಎಕರೆ ಜಮೀನಿನಿಂದ ಜೀವನೋಪಾಯ ಮಾಡಲು ನಿರ್ಧರಿಸಿದರು. ಇದೇ ವೇಳೆ ಭತ್ತ ನಾಟಿ ಮಾಡುವಾಗ ರೈತರು ಪಡುತ್ತಿರುವ ಕಷ್ಟ ನೋಡಿ ನಾಗಸ್ವಾಮಿಗೆ ಅರಗಿಸಿಕೊಳ್ಳಲಾಗಲಿಲ್ಲ. ಕೈಯಾರೆ ಭತ್ತ ನಾಟಿ ಮಾಡಲು ಕೃಷಿ ಕಾರ್ಮಿಕರ ಕೊರತೆಯೂ ಅವರ ಗಮನಕ್ಕೆ ಬಂದಿದೆ.

BIG NEWS: ರಮೇಶ್ ಕುಮಾರ್ ಹೇಳಿಕೆ ವಿಚಾರ; ಬಿಜೆಪಿಯಿಂದ ರಾಜಕೀಯ; ಚರ್ಚೆಗೆ ಸಿದ್ಧ ಎಂದ ಡಿ.ಕೆ.ಶಿವಕುಮಾರ್

ಈ ಸಮಸ್ಯೆಗೆ ಪರಿಹಾರ ಹುಡುಕಲು ಯಂತ್ರ ಸಿದ್ಧಪಡಿಸುವ ಗುರಿಯೊಂದಿಗೆ ಆತ ಯೂಟ್ಯೂಬ್​ ಟ್ಯುಟೋರಿಯಲ್​ ವಿಡಿಯೊಗಳನ್ನು ವೀಕ್ಷಿಸಲು ಪ್ರಾರಂಭಿಸಿದರು. ಹಾಗೂ ಹೀಗು ಭತ್ತ ನಾಟಿ ಮಾಡುವ ಯಂತ್ರವನ್ನು ಆವಿಷ್ಕರಿಸಲು ನಾಗಸ್ವಾಮಿಗೆ ಒಂದು ವರ್ಷ ಸಮಯ ಬೇಕಾಯಿತು. ಅದಕ್ಕೆ 50 ಸಾವಿರ ರೂ. ವೆಚ್ಚವೂ ಆಯಿತು.

ಎರಡು- 12ಮೋಲ್ಟ್​ ಬ್ಯಾಟರಿಗಳು ಮತ್ತು ಬಿಆರ್​ಟಿಎಸ್​ ಮೋಟಾರ್​ನೊಂದಿಗೆ ಅಳವಡಿಸಲಾದ ಯಂತ್ರ ಸಿದ್ಧವಾಗಿದ್ದು, ನಾಗಸ್ವಾಮಿ ಹೇಳುವ ಪ್ರಕಾರ, ನಾಟಿ ಯಂತ್ರವು ಬ್ಯಾಟರಿಗಳಲ್ಲಿ ಕಾರ್ಯನಿರ್ವಹಿಸುತ್ತದೆ, ಇದರಿಂದಾಗಿ ಜನರ ಕೊರತೆ ನೀಗುತ್ತದೆ, ಯಂತ್ರವು ಭತ್ತವನ್ನು ಒಂದೇ ಸಾಲಿನಲ್ಲಿ ಐದು ಸಾಲುಗಳಲ್ಲಿ ನಾಟಿ ಮಾಡುತ್ತದೆ.

ಇದೀಗ ಅವರು ಆ ಭಾಗದ ರೈತರ ಕಣ್ಮಣಿಯಾಗಿದ್ದಾರೆ. ಇನ್ನೊಂದಿಷ್ಟು ಹೊಸ ಆವಿಷ್ಕಾರಗಳತ್ತಲೂ ಮನಸ್ಸು ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments