Thursday, August 11, 2022
Google search engine
HomeUncategorizedಮೊದಲ ದಿನದ ಗಳಿಕೆಯಲ್ಲೇ ಹೊಸ ದಾಖಲೆ ಬರೆದ ಸುದೀಪ್ ‘ವಿಕ್ರಾಂತ್ ರೋಣ’

ಮೊದಲ ದಿನದ ಗಳಿಕೆಯಲ್ಲೇ ಹೊಸ ದಾಖಲೆ ಬರೆದ ಸುದೀಪ್ ‘ವಿಕ್ರಾಂತ್ ರೋಣ’

ಮೊದಲ ದಿನದ ಗಳಿಕೆಯಲ್ಲೇ ಹೊಸ ದಾಖಲೆ ಬರೆದ ಸುದೀಪ್ ‘ವಿಕ್ರಾಂತ್ ರೋಣ’

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಬಿಡುಗಡೆಯಾದಲ್ಲೆಲ್ಲ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಅಭಿಮಾನಿಗಳು, ಸಿನಿರಸಿಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಮೊದಲ ದಿನದ ಗಳಿಕೆಯಲ್ಲಿ ‘ವಿಕ್ರಾಂತ್ ರೋಣ’ ದಾಖಲೆ ಬರೆದಿದೆ.

‘ಕೆಜಿಎಫ್ ಚಾಪ್ಟರ್ 2’ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿ ಮೊದಲ ದಿನದ ಗಳಿಕೆಯಲ್ಲಿ ದಾಖಲೆ ಬರೆದಿತ್ತು. ‘ವಿಕ್ರಾಂತ್ ರೋಣ’ ಮೊದಲ ದಿನವೇ ‘ಕೆಜಿಎಫ್ ಚಾಪ್ಟರ್ 2’ ದಾಖಲೆ ಹಿಂದಿಕ್ಕಿದೆ. ಬಹು ಭಾಷೆಗಳಲ್ಲಿ ತೆರೆಕಂಡ ‘ವಿಕ್ರಾಂತ್ ರೋಣ’ ಮೊದಲ ದಿನ 50 ಕೋಟಿ ರೂ. ಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ.

‘ವಿಕ್ರಾಂತ್ ರೋಣ’ 2,500 ಸ್ಕ್ರೀನ್ ಗಳಲ್ಲಿ ತೆರೆ ಕಂಡಿದ್ದು, 9500 ಕ್ಕೂ ಅಧಿಕ ಪ್ರದರ್ಶನ ಕಾಣುತ್ತಿದೆ. ತ್ರೀಡಿಯಲ್ಲಿ ವಿಶ್ವದಾದ್ಯಂತ 1,600ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿಯೂ ‘ವಿಕ್ರಾಂತ್ ರೋಣ’ ತೆರೆ ಕಂಡಿದೆ. ಇನ್ನು ದೇಶಾದ್ಯಂತ ‘ವಿಕ್ರಾಂತ್ ರೋಣ’ ಚಿತ್ರದ 1,047 ಕನ್ನಡ ಶೋ ಪ್ರದರ್ಶನ ಕಾಣುತ್ತಿದ್ದು, ‘ಕೆಜಿಎಫ್ ಚಾಪ್ಟರ್ 2’ ಚಿತ್ರಕ್ಕೆ 913 ಶೋಗಳು ಸಿಕ್ಕಿದ್ದವು. ‘ಕೆಜಿಎಫ್ ಚಾಪ್ಟರ್ 2’ ದಾಖಲೆಯನ್ನು ‘ವಿಕ್ರಾಂತ್ ರೋಣ’ ಹಿಂದಿಕ್ಕಿದೆ ಎಂದು ಹೇಳಲಾಗಿದೆ.

‘ವಿಕ್ರಾಂತ್ ರೋಣ’ 1,600, ‘ಕೆಜಿಫ್ ಚಾಪ್ಟರ್ 2’ 913 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿ ಸ್ಯಾಂಡಲ್ವುಡ್ ನಲ್ಲಿ ದಾಖಲೆ ಬರೆದ ಚಿತ್ರಗಳಾಗಿವೆ. ‘ಜೇಮ್ಸ್’ 845, ‘ಯುವರತ್ನ’ 718 ಸ್ಕ್ರೀನ್ ಗಳಲ್ಲಿ ತೆರೆ ಕಂಡಿವೆ ಎನ್ನಲಾಗಿದೆ.

ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಸಾಹಸಮಯ ಫ್ಯಾಂಟಸಿ ಚಿತ್ರವಾಗಿದ್ದು, ಸುದೀಪ್, ನಿರೂಪ್ ಭಂಡಾರಿ, ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ನೀತಾ ಅಶೋಕ್ ನಟಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments