Friday, October 7, 2022
Google search engine
HomeUncategorizedಮೆಟ್ರೋದಲ್ಲಿ ಎಗ್ಗಿಲ್ಲದೆ ಹುಡುಗಿಯೊಬ್ಬಳ ಬೊಂಬಾಟ್ ಡಾನ್ಸ್​

ಮೆಟ್ರೋದಲ್ಲಿ ಎಗ್ಗಿಲ್ಲದೆ ಹುಡುಗಿಯೊಬ್ಬಳ ಬೊಂಬಾಟ್ ಡಾನ್ಸ್​

ಮೆಟ್ರೋದಲ್ಲಿ ಎಗ್ಗಿಲ್ಲದೆ ಹುಡುಗಿಯೊಬ್ಬಳ ಬೊಂಬಾಟ್ ಡಾನ್ಸ್​

ಸಾರ್ವಜನಿಕ ಪ್ರದೇಶದಲ್ಲಿ, ಪರಿಚಯವಿಲ್ಲದ ಸ್ಥಳದಲ್ಲಿ ತಮ್ಮ ಪ್ರತಿಭೆ ಅನಾವರಣ ಮಾಡುವುದು ಅಥವಾ ಗಮನ ಸೆಳೆಯುವ ಚಟುವಟಿಕೆ ನಡೆಸುವುದು ಅಷ್ಟು ಸಲೀಸಲ್ಲದ ಕೆಲಸ.

ಆದರೆ, ಇತ್ತೀಚೆಗೆ ಇದು ಟ್ರೆಂಡ್​ ಆಗುತ್ತಿದೆ. ಬೇರೆಯರ ವಿಚಾರ ನಮಗೇಕೆ ಎಂದು ತಮಗನಿಸಿದ್ದನ್ನು ಮಾಡುವ ಉದಾಹರಣೆ ಸಾಕಷ್ಟಿದೆ. ಇತ್ತೀಚೆಗೆ ಚಲಿಸುತ್ತಿರುವ ದೆಹಲಿ ಮೆಟ್ರೋ ರೈಲಿನಲ್ಲಿ ಹುಡುಗಿಯೊಬ್ಬಳು ಡ್ಯಾನ್ಸ್​ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಡ್ಯಾನ್ಸ್​ ಮಾಡುವುದನ್ನು ಆಕೆಯ ಸ್ನೇಹಿತೆ ರೆಕಾರ್ಡ್​ ಮಾಡಿದ್ದಾರೆ. ಇವರಿಬ್ಬರ ಈ ಸಾಹಸವನ್ನು ಇನ್ನೊಬ್ಬರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ಕ್ಲಿಪ್​ ಅನ್ನು ಥಿನ್ಲೇ ಭುಟಿಯಾ ಎಂಬುವರು ಇನ್​ಸ್ಟಾದಲ್ಲಿ ಪೋಸ್ಟ್​ ಮಾಡಿದ್ದಾರೆ.

ಕ್ಯಾಮೆರಾದ ಮುಂದೆ ಅವಳ ಸ್ನೇಹಿತ ನೃತ್ಯವನ್ನು ಪ್ರಾರಂಭಿಸಲು ಕೌಂಟ್​ಡೌನ್​ ನೀಡುತ್ತಿರುವಾಗ ಹುಡುಗಿ ಮೆಟ್ರೋದ ಕಂಪಾರ್ಟ್​ಮೆಂಟ್​ನ ಮಧ್ಯದಲ್ಲಿ ನಿಂತಿರುವುದನ್ನು ಕಾಣಬಹುದು. ಜನಸಮೂಹದ ಗಿಜಿಗಿಜಿ ಕೂಡ ಅಲ್ಲಿ ಕೇಳಿಸುತ್ತದೆ. ಅದರ ನಡುವೆಯೂ ಕ್ಷೀಣವಾಗಿ ಕೇಳಿಸಬಹುದಾದ ಹಾಡಿಗೆ ಆಕೆ ಕುಣಿಯುತ್ತಾಳೆ. ಅಲ್ಲಿದ್ದ ಕೆಲವರು ಇದನ್ನು ನೋಡುತ್ತಿದ್ದರೂ ಅದರ ಬಗ್ಗೆ ಆ ಹುಡುಗಿ ತಲೆ ಕೆಡಿಸಿಕೊಂಡಿಲ್ಲ. ಈ ಪೋಸ್ಟ್​ಗೆ “ಇದು ಆತ್ಮವಿಶ್ವಾಸ” ಎಂದು ಶೀರ್ಷಿಕೆ ನೀಡಲಾಗಿದೆ.

ಅಂತಹ ರೀಲ್​ಗಳನ್ನು ರೆಕಾರ್ಡಿಂಗ್ ಮಾಡುವ ಕ್ರೇಜ್​ ಬಗ್ಗೆ ನೆಟ್ಟಿಗರು ಕಾಮೆಂಟ್​ ವಿಭಾಗದಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಸಾರ್ವಜನಿಕವಾಗಿ ಅಂತಹದನ್ನು ರೆಕಾರ್ಡ್​ ಮಾಡುವ ವಿಶ್ವಾಸ ಬೇಕು ಎಂದು ಒಬ್ಬರು ಕಾಮೆಂಟ್​ ಮಾಡಿದ್ದಾರೆ.

ನಾನು ಅಂತಹ ಜನನಿಬಿಡ ಸ್ಥಳದಲ್ಲಿ ಮುಂಭಾಗದ ಕ್ಯಾಮರಾವನ್ನು ತೆರೆದರೆ, ಆತಂಕ ಶುರುವಾಗುತ್ತದೆ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

ಇನ್ನೊಬ್ಬರು ಮಾತ್ರ ಹಾಸ್ಯಮಯವಾಗಿ ಕಾಮೆಂಟ್​ಮಾಡಿ, ರೆೈಲಿನ ಪ್ರಯಾಣಿಕರ ಬಗ್ಗೆ ನನಗೆ ಕರುಣೆ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments