Sunday, September 25, 2022
Google search engine
HomeUncategorizedಮುನಿಸಿಕೊಂಡಿದ್ದ ಶಿಕ್ಷಕಿಯನ್ನು ಸಂತೈಸಿದ ಪುಟ್ಟ ಬಾಲಕ; ಮುದ್ದಾದ ವಿಡಿಯೋ ವೈರಲ್

ಮುನಿಸಿಕೊಂಡಿದ್ದ ಶಿಕ್ಷಕಿಯನ್ನು ಸಂತೈಸಿದ ಪುಟ್ಟ ಬಾಲಕ; ಮುದ್ದಾದ ವಿಡಿಯೋ ವೈರಲ್

ಮುನಿಸಿಕೊಂಡಿದ್ದ ಶಿಕ್ಷಕಿಯನ್ನು ಸಂತೈಸಿದ ಪುಟ್ಟ ಬಾಲಕ; ಮುದ್ದಾದ ವಿಡಿಯೋ ವೈರಲ್

ಪುಟಾಣಿ ಬಾಲಕ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕಿಯ ನಡುವಿನ ಮುದ್ದಾದ ಸಂಭಾಷಣೆ ಇರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಬಾಲಕ ಶಿಕ್ಷಕಿಯನ್ನು ಸಂತೈಸುವುದು ಮತ್ತು ಆಕೆಯ ಕೆನ್ನೆಗೆ ಮುತ್ತು ಕೊಡುತ್ತಿರುವುದನ್ನು ನೋಡಬಹುದು. ಈ ವಿಡಿಯೋ ಕೆಲವರಿಗೆ ಪ್ರಿಯವಾಗಿ ಕಂಡುಬಂದರೆ, ಹಲವರು ಇದರ ಬಗ್ಗೆ ವಿಭಿನ್ನ ರೀತಿಯ ಅಭಿಪ್ರಾಯವನ್ನು ಹೊಂದಿದ್ದರು.

ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿಯೂ ಹಂಚಿಕೊಳ್ಳಲಾಗಿದೆ. ಬಾಲಕನೊಬ್ಬ ತನ್ನ ಶಾಲಾ ಶಿಕ್ಷಕಿಯನ್ನು ಅಪ್ಪಿಕೊಂಡು ತಾನು ಮಾಡಿದ ತಪ್ಪಿಗೆ ಕ್ಷಮೆಯಾಚಿಸುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಶಿಕ್ಷಕಿ, ಬಾಲಕ ಮಾಡಿರೋ ತಪ್ಪನ್ನು ಖಂಡಿಸಿದ್ದಾರೆ. ತನ್ನ ಆ ನಡವಳಿಕೆಯನ್ನು ಪುನರಾವರ್ತಿಸುವುದಿಲ್ಲ ಎಂದು ಭರವಸೆ ನೀಡುತ್ತಾ ಪುಟ್ಟ ಪೋರ ಶಿಕ್ಷಕಿಯ ಕೆನ್ನೆಗೆ ಮುತ್ತಿಕ್ಕಿದ್ದಾನೆ.

ಈ ವಿಡಿಯೋ ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಬಹುತೇಕ ಮಂದಿ ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ಆದರೆ ಕೆಲವರು ಮಾತ್ರ ಇದು ಶಿಕ್ಷಕ-ವಿದ್ಯಾರ್ಥಿ ನಡುವಿನ ಸಂಬಂಧಕ್ಕೆ ಆದರ್ಶ ಉದಾಹರಣೆಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments