Thursday, August 11, 2022
Google search engine
HomeUncategorizedಮುಟ್ಟಿನ ನೋವು ಹೆಚ್ಚಾಗಲು ಇದೇ ಕಾರಣವಂತೆ

ಮುಟ್ಟಿನ ನೋವು ಹೆಚ್ಚಾಗಲು ಇದೇ ಕಾರಣವಂತೆ

ಮುಟ್ಟಿನ ನೋವು ಹೆಚ್ಚಾಗಲು ಇದೇ ಕಾರಣವಂತೆ

ಮುಟ್ಟು ಒಂದು ನೈಸರ್ಗಿಕ ಕ್ರಿಯೆ. ಮಹಿಳೆಯಾದವಳು ಪ್ರತಿ ತಿಂಗಳು ಮೂರ್ನಾಲ್ಕು ದಿನ ಯಮ ಯಾತನೆ ಅನುಭವಿಸಲೇಬೇಕು.

ಕೆಲವರನ್ನು ಮುಟ್ಟು ಅತಿಯಾಗಿ ಕಾಡುತ್ತದೆ. ಕಾಲು-ಸೊಂಟ ನೋವು, ರಕ್ತಸ್ರಾವ, ಮಾನಸಿಕ ಕಿರಿಕಿರಿ ಸಾಕಪ್ಪ ಸಾಕು ಎನ್ನುವಂತೆ ಮಾಡುತ್ತದೆ. ಮುಟ್ಟಿನ ನೋವು ಹೆಚ್ಚಾಗಲು ನಮ್ಮ ಜೀವನ ಶೈಲಿ ಕೂಡ ಕಾರಣ. ನಾವು ತಿನ್ನುವ ಆಹಾರ ಹಾಗೂ ಜೀವನಾಭ್ಯಾಸಗಳು ಮುಟ್ಟಿನ ನೋವನ್ನು ಹೆಚ್ಚು ಮಾಡುತ್ತವೆ.

ನಿದ್ರೆ ಕೊರತೆ : ದೇಹದಲ್ಲಿ ಹಾರ್ಮೋನುಗಳ ಸಮತೋಲನಕ್ಕೆ ನಿದ್ರೆ ಬೇಕೇಬೇಕು. ಅಗತ್ಯವಿರುವಷ್ಟು ನಿದ್ರೆ ದೇಹಕ್ಕೆ ಸಿಕ್ಕಿಲ್ಲವೆಂದಾದ್ರೆ ಮುಟ್ಟಿನ ಅವಧಿಯಲ್ಲಿ ನೋವು ತಿನ್ನಬೇಕಾಗುತ್ತದೆ.

ಕಾಫಿ ಚಟ : ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಕುಡಿಯುವುದ್ರಿಂದ ಮುಟ್ಟಿನ ಸಮಯದಲ್ಲಿ ಹೆಚ್ಚಿನ ನೋವು ಕಾಣಿಸಿಕೊಳ್ಳುತ್ತದೆ. ಕಾಫಿಯಲ್ಲಿರುವ ಕೆಫೆನ್ ಇದಕ್ಕೆ ಕಾರಣ. ಕಾಫಿ ಕುಡಿಯುವುದ್ರಿಂದ ಆಗಾಗ ಮೂತ್ರವಿಸರ್ಜನೆಗೆ ಹೋಗಬೇಕಾಗುತ್ತದೆ. ಇದು ರಕ್ತನಾಳ ಕಿರಿದಾಗಿ ನೋವು ಹೆಚ್ಚಾಗಲು ಕಾರಣವಾಗುತ್ತದೆ.

ಧೂಮಪಾನ-ಆಲ್ಕೋಹಾಲ್ : ಧೂಮಪಾನ ಹಾಗೂ ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಇದು ಎಲ್ಲರಿಗೂ ತಿಳಿದಿರುವ ವಿಷ್ಯ. ಆದ್ರೆ ಇದು ಮುಟ್ಟಿನ ಮೇಲೂ ಪ್ರಭಾವ ಬೀರುತ್ತದೆ. ಅನೇಕ ಅಧ್ಯಯನಗಳಿಂದ ಈ ವಿಷ್ಯ ಬಹಿರಂಗವಾಗಿದೆ. ಧೂಮಪಾನ ಹಾಗೂ ಮದ್ಯಪಾನ ಮಾಡುವ ಮಹಿಳೆಯರಲ್ಲಿ ಮುಟ್ಟಿನ ವೇಳೆ ಹೆಚ್ಚು ನೋವಾಗುತ್ತದೆ.

ವ್ಯಾಯಾಮ : ದೇಹದಲ್ಲಿ ರಕ್ತ ಪರಿಚಲನೆ ಉತ್ತಮವಾಗಬೇಕೆಂದ್ರೆ ವ್ಯಾಯಾಮ ಮಾಡಬೇಕು. ವ್ಯಾಯಾಮ ಆರೋಗ್ಯ ವೃದ್ಧಿಗೆ ಒಳ್ಳೆಯದು. ಆದ್ರೆ ಬಹುತೇಕ ಮಹಿಳೆಯರು ಮುಟ್ಟಿನ ವೇಳೆ ಮೂರು ಹೊತ್ತು ಹಾಸಿಗೆ ಮೇಲಿರುತ್ತಾರೆ. ಇದು ನೋವು ಇನ್ನಷ್ಟು ದಿನ ಕಾಡಲು ಕಾರಣವಾಗುತ್ತದೆ.

ಸಿಹಿ ಹಾಗೂ ಉಪ್ಪಿನ ಆಹಾರ : ಸಕ್ಕರೆ ಪ್ರಮಾಣ ದೇಹದಲ್ಲಿ ಹೆಚ್ಚಾದ್ರೆ ಉರಿಯೂತ ಕಾಡುತ್ತದೆ. ಉಪ್ಪು ಕೂಡ ಮುಟ್ಟಿನ ನೋವನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ಮುಟ್ಟಿನ ವೇಳೆ ಸಕ್ಕರೆ ಹಾಗೂ ಉಪ್ಪಿನಿಂದ ದೂರವಿರುವುದು ಒಳ್ಳೆಯದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments