Wednesday, August 17, 2022
Google search engine
HomeUncategorizedಶಾಸಕ ಜಮೀರ್ ಅಹ್ಮದ್ ಸಿಎಂ ಆಗ್ತಾರೆ; ಭವಿಷ್ಯ ನುಡಿದ ವಿರಕ್ತ ಮಠದ ಕುಮಾರೇಶ್ವರ ಸ್ವಾಮೀಜಿ

ಶಾಸಕ ಜಮೀರ್ ಅಹ್ಮದ್ ಸಿಎಂ ಆಗ್ತಾರೆ; ಭವಿಷ್ಯ ನುಡಿದ ವಿರಕ್ತ ಮಠದ ಕುಮಾರೇಶ್ವರ ಸ್ವಾಮೀಜಿ

ಶಾಸಕ ಜಮೀರ್ ಅಹ್ಮದ್ ಸಿಎಂ ಆಗ್ತಾರೆ; ಭವಿಷ್ಯ ನುಡಿದ ವಿರಕ್ತ ಮಠದ ಕುಮಾರೇಶ್ವರ ಸ್ವಾಮೀಜಿ

ಮುಂಬರುವ ವಿಧಾನಸಭಾ ಚುನಾವಣೆಗೆ ಇನ್ನೂ ಕಾಲ ಕೂಡಿ ಬಂದಿಲ್ಲವಾದರೂ ಈಗಾಗಲೇ ಅಧಿಕಾರಕ್ಕೇರುವ ಕನಸು ಕಾಣುತ್ತಿರುವ ಕಾಂಗ್ರೆಸ್ಸಿಗರು ಮುಖ್ಯಮಂತ್ರಿ ಸ್ಥಾನಕ್ಕೆ ದಿನಕ್ಕೊಂದು ಹೆಸರನ್ನು ತೇಲಿ ಬಿಡುತ್ತಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಹಲವು ನಾಯಕರ ಹೆಸರುಗಳು ಪ್ರಸ್ತಾಪವಾಗುತ್ತಿದ್ದು, ಇದರ ಮಧ್ಯೆ ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಹೋದಲ್ಲಿ ಬಂದಲ್ಲಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಂದು ಬಿಂಬಿಸುತ್ತಿದ್ದಾರೆ.

ಇದು ಪಕ್ಷದೊಳಗೂ ಅಸಮಾಧಾನಕ್ಕೆ ಕಾರಣವಾಗಿದ್ದು ಜಮೀರ್ ಅಹಮದ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಕೆಲವು ಕಾಂಗ್ರೆಸ್ ನಾಯಕರು ಒತ್ತಾಯಿಸುತ್ತಿದ್ದಾರೆ. ಈ ನಡುವೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯಕ್ಕುಂಡಿ ವಿರಕ್ತಮಠದ ಶ್ರೀ ಕುಮಾರೇಶ್ವರ ಸ್ವಾಮೀಜಿ, ಶಾಸಕ ಜಮೀರ್ ಅಹ್ಮದ್ ಮುಂದೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಶನಿವಾರ ರಾತ್ರಿ ಜಮೀರ್ ಅಹಮದ್ ಅವರು ಯಕ್ಕುಂಡಿ ವಿರಕ್ತಮಠಕ್ಕೆ ಭೇಟಿ ನೀಡಿ ಕುಮಾರಸ್ವಾಮೀಜಿಯವರ ಆಶೀರ್ವಾದ ಪಡೆದ ವೇಳೆ ಈ ಮಾತನ್ನು ಹೇಳಿ ಶ್ರೀಗಳು ಶುಭ ಹಾರೈಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments