Monday, December 5, 2022
Google search engine
HomeUncategorizedಮಾಲೀಕನಂತೆ ಜಿಗಿದು ಜಿಗಿದು ಜಾಗಿಂಗ್​ ಮಾಡಿದ ಶ್ವಾನ….! ವಿಡಿಯೋ ವೈರಲ್​

ಮಾಲೀಕನಂತೆ ಜಿಗಿದು ಜಿಗಿದು ಜಾಗಿಂಗ್​ ಮಾಡಿದ ಶ್ವಾನ….! ವಿಡಿಯೋ ವೈರಲ್​

ಮಾಲೀಕನಂತೆ ಜಿಗಿದು ಜಿಗಿದು ಜಾಗಿಂಗ್​ ಮಾಡಿದ ಶ್ವಾನ….! ವಿಡಿಯೋ ವೈರಲ್​

ನಾಯಿಗಳ ಬಗ್ಗೆ ಹೇಳಿದಷ್ಟೂ ಕಮ್ಮಿಯೇ. ಅದರಲ್ಲಿಯೂ ಇತ್ತೀಚಿಗೆ ಹೆಚ್ಚು ವೈರಲ್​ ಆಗುತ್ತಿರುವ ಪ್ರಾಣಿ ಎಂದರೆ ಅದು ನಾಯಿ. ತನ್ನ ಮಾಲೀಕ ಹೇಳಿದಂತೆ ಕೇಳುವ ಕ್ಯೂಟ್​ ಎನಿಸುವ ಹಲವಾರು ವಿಡಿಯೋಗಳು ವೈರಲ್​ ಆಗುತ್ತಿದ್ದು, ಅಂಥದ್ದೇ ಒಂದು ವಿಡಿಯೋ ಅನ್ನು ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಶೇರ್​ ಮಾಡಿದ್ದಾರೆ.

ನಾಯಿ ಮತ್ತು ಅದರ ಮಾಲೀಕರ ವಿಡಿಯೋ ಇದಾಗಿದೆ. ತನ್ನ ಮಾಲೀಕನ ಜತೆ ಜಾಗಿಂಗ್​ಗೆ ಹೋಗಿರುವ ನಾಯಿ, ಮಾಲೀಕನನ್ನೇ ಅನುಸರಿಸುತ್ತಿರುವುದು ವಿಡಿಯೋದಲ್ಲಿ ನೋಡಬಹುದು.

ಜಾಗಿಂಗ್​ ರೀತಿಯಲ್ಲಿಅವರು ಬೇಕಂತೆಲೇ ಜಿಗಿದು ಜಿಗಿದು ಹೋಗುತ್ತಿದ್ದು, ನಾಯಿ ಕೂಡ ಅವರನ್ನೇ ಹಿಂಬಾಲಿಸುತ್ತಾ ತಾನೂ ಜಿಗಿದು ಜಿಗಿದು ಹೋಗುತ್ತಿರುವ ವಿಡಿಯೋ ಇದಾಗಿದೆ. ಒಂಟಿ ಕಾಲಿನಲ್ಲಿ ಜಿಗಿಯುವುದನ್ನು ನೋಡಿದ ನಾಯಿ, ತಾನೂ ಥೇಟ್​ ಹಾಗೆಯೇ ಮಾಡಿರುವುದು ನೆಟ್ಟಿಗರ ಮನಸ್ಸು ಗೆದ್ದಿದೆ. ಥರಹೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments