Friday, March 24, 2023
Google search engine
HomeUncategorizedಮಹಿಳಾ ಪ್ರವಾಸಿಗರಿಗೆ KSTDC ಬಂಪರ್ ಕೊಡುಗೆ; ಶೇ.50 ರಷ್ಟು ರಿಯಾಯಿತಿ ಘೋಷಣೆ

ಮಹಿಳಾ ಪ್ರವಾಸಿಗರಿಗೆ KSTDC ಬಂಪರ್ ಕೊಡುಗೆ; ಶೇ.50 ರಷ್ಟು ರಿಯಾಯಿತಿ ಘೋಷಣೆ

ಮಹಿಳಾ ಪ್ರವಾಸಿಗರಿಗೆ KSTDC ಬಂಪರ್ ಕೊಡುಗೆ; ಶೇ.50 ರಷ್ಟು ರಿಯಾಯಿತಿ ಘೋಷಣೆ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಮಹಿಳಾ ಪ್ರಯಾಣಿಕರಿಗೆ ಬಂಪರ್ ಕೊಡುಗೆ ಘೋಷಿಸಿದೆ. ಮಾರ್ಚ್ 6ರಿಂದ 10ರ ವರೆಗಿನ ಅವಧಿಯಲ್ಲಿ ಇದು ಲಭ್ಯವಿರಲಿದೆ.

ಮಹಿಳಾ ಪ್ರವಾಸಿಗರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಕೊಡುಗೆಯ ಅವಧಿಯಲ್ಲಿ KSTDC ವತಿಯಿಂದ ನಿರ್ವಹಣೆ ಮಾಡುತ್ತಿರುವ ಮಯೂರ ಗ್ರೂಪ್ ಹೋಟೆಲ್ ಗಳಲ್ಲಿ ಕೊಠಡಿ ಬುಕ್ಕಿಂಗ್ ನಲ್ಲಿ ಶೇ.50 ಹಾಗೂ ಊಟೋಪಚಾರದ ಮೇಲೆ ಶೇ. 20ರಷ್ಟು ರಿಯಾಯಿತಿ ಸಿಗಲಿದೆ.

ಓರ್ವ ಮಹಿಳೆ/ಕುಟುಂಬ/ ಮಹಿಳೆಯರ ಗುಂಪು ಪ್ರವಾಸ ಕೈಗೊಂಡಲ್ಲಿ ಈ ರಿಯಾಯಿತಿ ಸಿಗಲಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-43344334 ಅಥವಾ ಮೊಬೈಲ್ ಸಂಖ್ಯೆ 8970650070/897088880 ಸಂಪರ್ಕಿಸಬಹುದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments