Thursday, February 2, 2023
Google search engine
HomeUncategorizedಮಳೆಯಾದರೇನು ಶಿವ, ಇದು ಮಾನ್ಸೂನ್​ ವೆಡ್ಡಿಂಗ್​ ಮಹಾಕಾವ್ಯ

ಮಳೆಯಾದರೇನು ಶಿವ, ಇದು ಮಾನ್ಸೂನ್​ ವೆಡ್ಡಿಂಗ್​ ಮಹಾಕಾವ್ಯ

ಮಳೆಯಾದರೇನು ಶಿವ, ಇದು ಮಾನ್ಸೂನ್​ ವೆಡ್ಡಿಂಗ್​ ಮಹಾಕಾವ್ಯ

ಮಳೆಯ ಹೊಡೆತದ ನಡುವೆಯೂ ಮದುವೆ ದಿಬ್ಬಣವೊಂದು ರಸ್ತೆಯಲ್ಲಿ ಸಾಗುವ ವಿಡಿಯೋವೊಂದು ವೈರಲ್​ ಆಗಿದೆ.

ಮಳೆ ಎಂದು ತಮ್ಮ ಸಂಪ್ರದಾಯ ಬಿಡಲೊಲ್ಲದ ಜನ ಬ್ಯಾಂಡ್​ಸೆಟ್​ ಆರ್ಕೆಸ್ಟ್ರಾ​ ಜೊತೆಗೆ ದೊಡ್ಡ ಟಾರ್ಪಲಿನ್​ ಬಳಸಿ ಮದುವೆ ದಿಬ್ಬಣ ಹೆಜ್ಜೆ ಹಾಕುವುದನ್ನು ಕಾಣಬಹುದು. ಅದರಲ್ಲೂ ಕೆಲವರು ಬೋ ಲೋ ತಾರಾರಾ ಹಾಡಿಗೆ ರಸ್ತೆಯಲ್ಲಿ ನಿಂತ ನೀರಿನಲ್ಲಿ ಹೆಜ್ಜೆ ಬಡಿದು ಕುಣಿಯುವುದೂ ಸಹ ಕಾಣಿಸುತ್ತದೆ.

ಐಪಿಎಸ್​ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, ಅಲಂಕೃತ ಬಸ್​ನೊಂದಿಗೆ ಬ್ಯಾಂಡ್​ ಪಾಟಿರ್ಯೊಂದಿಗೆ ಮುನ್ನಡೆಯುತ್ತಿರುವ ವರನ ದಿಬ್ಬಣ ಸಾಗುತ್ತದೆ. “ಇಸ್ಸೆ ಎಪಿಕ್​ ಬಾರಾತ್​ ಮೈನ್​ ನೆ ಆಜ್​ ತಕ್​ ನಹಿ ದೇಖಿ (ನಾನು ಈ ಹಿಂದೆ ಅಂತಹ ಮಹಾಕಾವ್ಯ ಬರಾತ್​ ನೋಡಿರಲಿಲ್ಲ)’ ಎಂದು ದೀಪಾಂಶು ಶೀರ್ಷಿಕೆ ಬರೆದುಕೊಂಡಿದ್ದಾರೆ.

ಈ ವಿಡಿಯೋ ನೋಡಿದ ಅನೇಕು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಮೀರಾ ನಾಯರ್​ ಅವರ ಪ್ರಸಿದ್ಧ ಚಲನಚಿತ್ರ ಮಾನ್ಸೂನ್​ ವೆಡ್ಡಿಂಗ್​ ಅನ್ನು ನೆನಪಿಸುತ್ತದೆ ಎಂದು ಒಬ್ಬರು ಹೇಳಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments