Tuesday, December 6, 2022
Google search engine
HomeUncategorizedಮನೆಯಲ್ಲೇ ಮಾಡಿ ಬಿಸಿ ಬಿಸಿ ಮ್ಯಾಗಿ ʼಪಕೋಡಾʼ

ಮನೆಯಲ್ಲೇ ಮಾಡಿ ಬಿಸಿ ಬಿಸಿ ಮ್ಯಾಗಿ ʼಪಕೋಡಾʼ

ಮನೆಯಲ್ಲೇ ಮಾಡಿ ಬಿಸಿ ಬಿಸಿ ಮ್ಯಾಗಿ ʼಪಕೋಡಾʼ

ಮ್ಯಾಗಿ ಮಕ್ಕಳ ಅಚ್ಚುಮೆಚ್ಚಿನ ಆಹಾರ. ತಟ್ ಅಂತ ರೆಡಿಯಾಗುವ ಈ ಮ್ಯಾಗಿ ಅಮ್ಮಂದಿರಿಗೂ ಇಷ್ಟ. ಆದ್ರೆ ಈ ಮ್ಯಾಗಿಯಲ್ಲಿ ಬಿಸಿ ಬಿಸಿ ಪಕೋಡಾ ಮಾಡಬಹುದು ಗೊತ್ತಾ?

ಮ್ಯಾಗಿ ಪಕೋಡಾಕ್ಕೆ ಬೇಕಾಗುವ ವಸ್ತು :

ಮ್ಯಾಗಿ : 1  ಪ್ಯಾಕೆಟ್

ರವೆ : 2 ಚಮಚ

ಕಡಲೆ ಹಿಟ್ಟು : 2 ಚಮಚ

ಈರುಳ್ಳಿ : 1

ಮೆಣಸಿನ ಕಾಯಿ : 1

ಎಲೆಕೋಸು : ಸಣ್ಣಗೆ ಹೆಚ್ಚಿದ್ದು ಸ್ವಲ್ಪ

ಕೆಂಪು ಮೆಣಸಿನ ಪುಡಿ : ಸಣ್ಣ ಚಮಚ

ಕೊತ್ತಂಬರಿ ಸೊಪ್ಪು : ಅರ್ಧ ಕಪ್

ಉಪ್ಪು : ರುಚಿಗೆ ತಕ್ಕಷ್ಟು

ಮ್ಯಾಗಿ ಪಕೋಡಾ ಮಾಡುವ ವಿಧಾನ :

ಒಂದು ಪಾತ್ರೆಗೆ ನೀರು ಹಾಕಿ ಬಿಸಿ ಮಾಡಿ. ಅದಕ್ಕೆ ಮ್ಯಾಗಿ ಪುಡಿ ಹಾಕಿ. ನಂತ್ರ ಮ್ಯಾಗಿ ಹಾಕಿ ಸ್ವಲ್ಪ ಬೇಯಿಸಿ. ನೀರನ್ನು ಕಡಿಮೆ ಹಾಕಿ. ಮ್ಯಾಗಿ ಬೆಂದ ಗ್ಯಾಸ್ ಬಂದ್ ಮಾಡಿ ಅದಕ್ಕೆ ಉಳಿದ ಎಲ್ಲ ಮಸಾಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇನ್ನೊಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಮ್ಯಾಗಿ ಮಿಶ್ರಣವನ್ನು ಪಕೋಡಾ ರೀತಿಯಲ್ಲಿ ಮಾಡಿ ಬಿಸಿ ಎಣ್ಣೆಗೆ ಹಾಕಿ ಕರಿಯಿರಿ. ಬಿಸಿ ಬಿಸಿ ಪಕೋಡಾ ಸವಿಯಲು ಸಿದ್ಧ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments