ಮನೆಯಲ್ಲಿ ಅಕ್ರಮ ಪಿಸ್ತೂಲ್ ಪತ್ತೆ; ಮಹಿಳಾ ಟ್ರೈನಿ ಸಬ್ ಇನ್ಸ್ ಪೆಕ್ಟರ್ ಅರೆಸ್ಟ್
ಹರಿಯಾಣದಲ್ಲಿ ಅಕ್ರಮ ಬಂದೂಕುಗಳೊಂದಿಗೆ ಸಿಕ್ಕಿಬಿದ್ದ ಮಹಿಳಾ ಟ್ರೈನಿ ಪೊಲೀಸ್ ನ ಅಮಾನತುಗೊಳಿಸಲಾಗಿದೆ.
ನೈನಾ ಕನ್ವಾಲ್ ರಾಜಸ್ಥಾನ ಪೊಲೀಸ್ ಇಲಾಖೆಯಲ್ಲಿ ಟ್ರೈನಿ ಸಬ್ ಇನ್ಸ್ ಪೆಕ್ಟರ್ ಆಗಿ ನೇಮಕಗೊಂಡಿದ್ದರು. ಆಕೆಯನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲಾಗಿದೆ.
ಅಪಹರಣ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಸುಮಿತ್ ನಂದಲ್‌ನ ಹುಡುಕಾಟದಲ್ಲಿ ರೋಹ್ಟಕ್‌ನಲ್ಲಿರುವ ಎಸ್‌ಐ ನೈನಾ ಕನ್ವಾಲ್ ಅವರ ಫ್ಲಾಟ್‌ನ ಮೇಲೆ ದೆಹಲಿ ಪೊಲೀಸರು ಗುರುವಾರ ದಾಳಿ ನಡೆಸಿದಾಗ ನೈನಾ ಕನ್ವಾಲ್ ಎರಡು ಪಿಸ್ತೂಲ್‌ಗಳೊಂದಿಗೆ ಸಿಕ್ಕಿಬಿದ್ದಿದ್ದರು.
ದೆಹಲಿ ಪೊಲೀಸರು ದಾಳಿಯ ಸಮಯದಲ್ಲಿ ಸಬ್ ಇನ್ಸ್ ಪೆಕ್ಟರ್ ನೈನಾ ಕನ್ವಾಲ್ ಅವರ ಫ್ಲಾಟ್‌ನಲ್ಲಿ ಎರಡು ಪರವಾನಗಿ ಇಲ್ಲದ ಪಿಸ್ತೂಲ್‌ಗಳನ್ನು ಪತ್ತೆ ಮಾಡಿದ್ದರು.. ಪೊಲೀಸರು ಎರಡೂ ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡರು ನೈನಾ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ಬಂಧಿಸಿದರು.
ರಾಜಸ್ಥಾನ ಪೊಲೀಸ್‌ನ ಹೆಚ್ಚುವರಿ ಮಹಾನಿರ್ದೇಶಕ (ಅಪರಾಧ) ಎಸ್ ಸೆಂಗಾಥಿರ್ ಅವರು ಶನಿವಾರ ಅಮಾನತು ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ನೈನಾ ಅವರನ್ನು ಕ್ರೀಡಾ ಕೋಟಾದಡಿಯಲ್ಲಿ ನೇಮಕ ಮಾಡಿಕೊಳ್ಳಲಾಗಿದೆ.