Sunday, September 25, 2022
Google search engine
HomeUncategorizedಮನಕಲಕುತ್ತೆ ಈ ವಿಡಿಯೋ; ಬದುಕಿನ ಬಂಡಿ ಎಳೆಯಲು ಪುಟ್ಟ ಮಗುವಿನೊಂದಿಗೆ ನಿತ್ಯ ಸೈಕಲ್‌ ಸವಾರಿ

ಮನಕಲಕುತ್ತೆ ಈ ವಿಡಿಯೋ; ಬದುಕಿನ ಬಂಡಿ ಎಳೆಯಲು ಪುಟ್ಟ ಮಗುವಿನೊಂದಿಗೆ ನಿತ್ಯ ಸೈಕಲ್‌ ಸವಾರಿ

ಮನಕಲಕುತ್ತೆ ಈ ವಿಡಿಯೋ; ಬದುಕಿನ ಬಂಡಿ ಎಳೆಯಲು ಪುಟ್ಟ ಮಗುವಿನೊಂದಿಗೆ ನಿತ್ಯ ಸೈಕಲ್‌ ಸವಾರಿ

ಕುಟುಂಬವನ್ನು ಸಾಕುವುದು ಅಷ್ಟು ಸಲೀಸಲ್ಲ ಎಂಬ ಅನೇಕ ಉದಾಹರಣೆಗಳು ನಮ್ಮ ಕಣ್ಣಮುಂದೆ ಕಾಣುತ್ತಿರುತ್ತದೆ. ಇಲ್ಲೊಬ್ಬ ಸೈಕಲ್​ ರಿಕ್ಷಾ ಚಾಲಕ ತನ್ನ ಪುಟ್ಟ ಮಗುವನ್ನು ಒಂದು ಕೈಯಲ್ಲಿ ಹಿಡಿದು ಮತ್ತೊಂದು ಕೈಯಲ್ಲಿ ಸೈಕಲ್​ ಬ್ಯಾಲೆನ್ಸ್​ ಮಾಡುವ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದು ಮಧ್ಯಪ್ರದೇಶದ ಜಬಲ್ಪುರದ ಸೈಕಲ್​ ರಿಕ್ಷಾ ಚಾಲಕನ ಕಥೆ. ಅವರ ಹೆಸರು ರಾಜೇಶ್​, ಬಿಹಾರ ಮೂಲದವರು. ನಗರದ ರಸ್ತೆಗಳಲ್ಲಿ ಸೈಕಲ್​ ರಿಕ್ಷಾ ಓಡಿಸುವಾಗ ತಮ್ಮ ಅಂಬೆಗಾಲಿಡುವ ಮಗನನ್ನು ಒಂದು ಕೈಯಲ್ಲಿ ಹಿಡಿದುಕೊಂಡೇ ಅವರು ಸಾಗುತ್ತಾರೆ.

ಮಗು ನಡುನಡುವೆ ಮಲಗಿದರೂ ಆತ ಕಷ್ಟಪಟ್ಟು ತಮ್ಮ ಕೆಲಸ ಮುಂದುವರಿಸುತ್ತಾರೆ. ಜಾಲತಾಣದಲ್ಲಿ ವಿಡಿಯೋವನ್ನು ಅಪ್​ಲೋಡ್​ ಮಾಡಿದ ನಂತರ, ವೈರಲ್​ ಆಗಿದ್ದು, ಸಾವಿರಾರು ವೀಕ್ಷಣೆ ಕಂಡಿದೆ. “ಕನಿಷ್ಠ ಇ-ರಿಕ್ಷಾವನ್ನು ನಿರ್ವಹಿಸಲು ಅವರಿಗೆ ಕ್ರೌಡ್​ಫಂಡಿಂಗ್​ ಅಭಿಯಾನವನ್ನು ನಿರ್ವಹಿಸೋಣ” ಎಂದು ಟ್ವಿಟ್ಟರ್​ ಬಳಕೆದಾರರೊಬ್ಬರು ಸಲಹೆ ನೀಡಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments