Thursday, August 11, 2022
Google search engine
HomeUncategorizedಮದುವೆ ಮೆರವಣಿಗೆಯಲ್ಲಿ ಗಾಬರಿಗೊಂಡು ಯರ್ರಾಬಿರ್ರಿ ಓಡಿದ ಕುದುರೆ; ಎದ್ದುಬಿದ್ದು ಓಡಿದ ಜನ…!

ಮದುವೆ ಮೆರವಣಿಗೆಯಲ್ಲಿ ಗಾಬರಿಗೊಂಡು ಯರ್ರಾಬಿರ್ರಿ ಓಡಿದ ಕುದುರೆ; ಎದ್ದುಬಿದ್ದು ಓಡಿದ ಜನ…!

ಮದುವೆ ಮೆರವಣಿಗೆಯಲ್ಲಿ ಗಾಬರಿಗೊಂಡು ಯರ್ರಾಬಿರ್ರಿ ಓಡಿದ ಕುದುರೆ; ಎದ್ದುಬಿದ್ದು ಓಡಿದ ಜನ…!

ಮದುವೆ ಸಂಭ್ರಮಾಚರಣೆ ವೇಳೆ ಕುದುರೆ ಗಾಬರಿಗೊಂಡು ಹುಚ್ಚುಹುಚ್ಚಾಗಿ ಓಡಿದ ಪ್ರಸಂಗವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

ರಸ್ತೆಯಲ್ಲಿ ಟ್ರಕ್‌ ಗೆ ಕಟ್ಟಲಾಗಿದ್ದ ಹತ್ತಾರು ಸ್ಪೀಕರ್​ನಲ್ಲಿ ಬರುತ್ತಿದ್ದ ಸಿನಿಮಾ ಹಾಡಿಗೆ ಕಿಕ್ಕಿರಿದು ಸೇರಿದ ಜನರ ಕುಣಿತದ ನಡುವೆ ಏಕಾಏಕಿ ಗೊಂದಲ ವಾತಾವಣ ನಿರ್ಮಾಣವಾಯಿತು. ಜನರ ನಡುವೆ ಇದ್ದ ಕುದುರೆ ಆ ಸದ್ದಿಗೆ ಕಿರಿಕಿರಿ ಅನುಭವಿಸಿ ಎಗರಿ ಹಾರಿಕೊಂಡು ಜನರ ನಡುವೆಯಿಂದ ಹೊರಕ್ಕೆ ಬಂದಿದೆ. ಈ ವೇಳೆ ಅಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯವಾದಂತಿದೆ. ಆದರೆ, ಕುದುರೆ ಎರಡು ಕಾಲಿನಲ್ಲಿ ನೆಗೆದಿದ್ದರಿಂದ ಅಲ್ಲಿದ್ದವರಂತೂ ಗಾಬರಿಗೊಂಡರು.

ಐಪಿಎಸ್​ ಅಧಿಕಾರಿ ದೀಪಾಂಶು ಕಾಬ್ರಾ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೊದ ಆರಂಭದಲ್ಲಿ ರಸ್ತೆಯ ಮೇಲಿದ್ದ ಜನಸಮೂಹವು ಟ್ರಕ್​ನ ಸ್ಪೀಕರ್​ಗಳಿಂದ ಮೊಳಗುತ್ತಿದ್ದ ಬಾಲಿವುಡ್​ ಹಾಡಿಗೆ ಡ್ಯಾನ್ಸ್​ ಮಾಡುವುದನ್ನು ಕಾಣಬಹುದು. ಜನಸಮೂಹದ ನಡುವೆ ಕುದುರೆ ಕಾಣಿಸುತ್ತಿರಲಿಲ್ಲ. ಆದರೆ, ಭಯಗೊಂಡ ಹುಚ್ಚುಹುಚ್ಚಾಗಿ ಜಿಗಿಯುತ್ತಾ ಓಡಿ ಹೊರಗೆ ಬರುವುದು ನಂತರ ಕಾಣಿಸುತ್ತದೆ.

ಸ್ಥಳದಲ್ಲಿ ಗಲಾಟೆಯಿಂದಾಗಿ ಕುದುರೆ ತಳಮಳಗೊಂಡಿರುವುದು ಖಚಿತ ಎಂದು ಆ ಅಧಿಕಾರಿ ಟ್ವೀಟ್​ ಮಾಡಿದ್ದಾರೆ. ಕುದುರೆಯ ಬಗ್ಗೆ ಸೂಕ್ಷ್ಮತೆ ಮತ್ತು ಮಾನವೀಯತೆಯನ್ನು ತೋರಿಸಿದರೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments