Saturday, November 26, 2022
Google search engine
HomeUncategorizedಸೈನಿಕನ ಮದುವೆ ವೇಳೆ ಮಂಟಪದಲ್ಲಿ ಗಲಾಟೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮೊದಲ ಪತ್ನಿಯೊಂದಿಗೆ ಯೋಧ ಆತ್ಮಹತ್ಯೆ

ಸೈನಿಕನ ಮದುವೆ ವೇಳೆ ಮಂಟಪದಲ್ಲಿ ಗಲಾಟೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮೊದಲ ಪತ್ನಿಯೊಂದಿಗೆ ಯೋಧ ಆತ್ಮಹತ್ಯೆ

ಸೈನಿಕನ ಮದುವೆ ವೇಳೆ ಮಂಟಪದಲ್ಲಿ ಗಲಾಟೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮೊದಲ ಪತ್ನಿಯೊಂದಿಗೆ ಯೋಧ ಆತ್ಮಹತ್ಯೆ

ಹಾಸನ: ಎರಡನೆಯ ಮದುವೆ ಸಂದರ್ಭದಲ್ಲಿ ಗಲಾಟೆಯಾಗಿದ್ದರಿಂದ ಯೋಧ ಮೊದಲ ಪತ್ನಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನಗೆ ತಾಳಿ ಕಟ್ಟಿ ಮತ್ತೊಂದು ಮದುವೆಯಾಗಲು ಹೊರಟಿದ್ದ ಯೋಧನ ವಿರುದ್ಧ ಕಲ್ಯಾಣ ಮಂಟಪದಲ್ಲಿ ಮೊದಲ ಪತ್ನಿ ಗಲಾಟೆ ಮಾಡಿ ಮದುವೆ ನಿಲ್ಲಿಸಿದ್ದರು. ಆಕೆಯೊಂದಿಗೆ ಯೋಧ ಶಾಂತಿಗ್ರಾಮ ಸಮೀಪದ ಕಾಡಿನಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ.

ಯೋಧ ಕಿರಣ್ ಹಾಸನದ ಬೂವನಹಳ್ಳಿ ಸಮೀಪ ಕಲ್ಯಾಣ ಮಂಟಪದಲ್ಲಿ ನವೆಂಬರ್ 10ರಂದು ಮದುವೆಯಾಗುವ ವೇಳೆ ಅಲ್ಲಿಗೆ ಬಂದ ಆಶಾ ತಾನು ವಿಧವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಕೆಲವು ತಿಂಗಳ ಹಿಂದೆ ಕಿರಣ್ ತನಗೆ ತಾಳಿ ಕಟ್ಟಿದ್ದಾನೆ. ಈಗ ಮತ್ತೆ ಮದುವೆಯಾಗಲು ಹೊರಟಿದ್ದಾನೆ ಎಂದು ಗಲಾಟೆ ಮಾಡಿದ್ದರು. ಈ ವೇಳೆಗಾಗಲೇ ಕಿರಣ್ ಎರಡನೇ ಮದುವೆಯಾಗಿದ್ದ. ಗಲಾಟೆಯ ನಂತರ ವಧು ಮದುವೆ ಬೇಡ ಎಂದು ತಾಳಿ ವಾಪಸ್ ಕೊಟ್ಟು ಹೋಗಿದ್ದಾರೆ. ರಾಜಿ ಸಂಧಾನದ ನಂತರ ಕಿರಣ್ ಮನೆಗೆ ಹೋಗಿ ಆಶಾರನ್ನು ಮತ್ತೆ ಸಂಪರ್ಕಿಸಿದ್ದಾನೆ. ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ನಂತರ ಅರಣ್ಯ ಪ್ರದೇಶದಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments