Wednesday, August 10, 2022
Google search engine
HomeUncategorizedಮದುವೆಯಾಗಲು ಹುಡುಗಿ ನಿರಾಕರಿಸಿದ್ದಕ್ಕೆ ಹೈಟೆನ್ಶನ್ ಟವರ್ ಏರಿದ ಭೂಪ….!

ಮದುವೆಯಾಗಲು ಹುಡುಗಿ ನಿರಾಕರಿಸಿದ್ದಕ್ಕೆ ಹೈಟೆನ್ಶನ್ ಟವರ್ ಏರಿದ ಭೂಪ….!

ಮದುವೆಯಾಗಲು ಹುಡುಗಿ ನಿರಾಕರಿಸಿದ್ದಕ್ಕೆ ಹೈಟೆನ್ಶನ್ ಟವರ್ ಏರಿದ ಭೂಪ….!

ಪ್ರೇಯಸಿ ಮದುವೆಯಾಗಲು ಒಲ್ಲೆ ಎಂದಿದ್ದಕ್ಕೆ ಮನನೊಂದ ಯುವಕನೊಬ್ಬ ಹೈ-ಟೆನ್ಶನ್ ಎಲೆಕ್ಟ್ರಿಕಲ್ ಟ್ರಾನ್ಸ್‌ಮಿಷನ್ ಟವರ್ ಮೇಲೆ ಹತ್ತಿ ಕುಳಿತ ಘಟನೆ ಚೆನ್ನೈನಲ್ಲಿ ನಡೆದಿದೆ. ಚೆನ್ನೈನ ಕ್ರೋಮ್‌ಪೇಟ್‌ನಲ್ಲಿ 19 ವರ್ಷದ ಯುವಕನೊಬ್ಬ ತಾಂಬರಂ ಸ್ಯಾನಿಟೋರಿಯಂ ಪ್ರದೇಶದಲ್ಲಿನ ಹೈ-ಟೆನ್ಶನ್ ಎಲೆಕ್ಟ್ರಿಕಲ್ ಟ್ರಾನ್ಸ್‌ಮಿಷನ್ ಟವರ್ ಮೇಲೆ ಹತ್ತಿದ್ದರಿಂದ ಉಪನಗರ ರೈಲು ಸೇವೆಗಳಲ್ಲಿ ವ್ಯತ್ಯಯವಾಗಿತ್ತು.

15 ವರ್ಷದ ಹುಡುಗಿಯೊಬ್ಬಳನ್ನು ಈತ ಪ್ರೀತಿಸ್ತಾ ಇದ್ದು, ತನ್ನನ್ನು ಮದುವೆಯಾಗುವಂತೆ ಅವಳ ಮನವೊಲಿಸಲು ಈ ಹುಚ್ಚು ಸಾಹಸ ಮಾಡಿದ್ದಾನೆ. ಈ ಯುವಕನನ್ನು ಕೃಷ್ಣ ಎಂದು ಗುರುತಿಸಲಾಗಿದ್ದು, ಈತ ರಾಧಾ ನಗರ ನಿವಾಸಿ. ಪೇಂಟರ್‌ ಆಗಿ ಈತ ಕೆಲಸ ಮಾಡ್ತಿದ್ದಾನೆ. ಅದೇ ಏರಿಯಾದಲ್ಲಿ ವಾಸಿಸ್ತಾ ಇರೋ 11ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳನ್ನು ಕೃಷ್ಣ ಪ್ರೀತಿಸುತ್ತಿದ್ದ. ತನ್ನನ್ನು ಮದುವೆಯಾಗುವಂತೆ ಆಕೆಗೆ ಪ್ರಪೋಸ್‌ ಮಾಡಿದ್ದಾನೆ.

ಆದ್ರೆ ಆ ಹುಡುಗಿ ಮದುವೆಗೆ ಒಪ್ಪಿಲ್ಲ. ಬಳಿಕ ಯುವಕ 80 ಅಡಿ ಎತ್ತರದ ವಿದ್ಯುತ್‌ ಟವರ್‌ ಅನ್ನು ಹತ್ತಿ ಕುಳಿತಿದ್ದಾನೆ. ಬೆಳಗ್ಗೆ 8 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಕೂಡಲೇ ಟವರ್‌ಗೆ ವಿದ್ಯುತ್‌ ಪೂರೈಕೆಯನ್ನು ಸ್ಥಗಿತಗೊಳಿಸಲಾಯ್ತು. ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ರು.

ಪೊಲೀಸರು, ಸ್ನೇಹಿತರು ಹಾಗೂ ಕುಟುಂಬಸ್ಥರು ಎಷ್ಟೇ ಮನವೊಲಿಸಲು ಯತ್ನಿಸಿದ್ರೂ ಯುವಕ ಟವರ್‌ನಿಂದ ಕೆಳಕ್ಕಿಳಿಯಲೇ ಇಲ್ಲ. ಬಳಿಕ ಆ ವಿದ್ಯಾರ್ಥಿನಿಯನ್ನೇ ಸ್ಥಳಕ್ಕೆ ಕರೆಸಲಾಯ್ತು. ಆಕೆ ಮದುವೆಯಾಗುವುದಾಗಿ ಮಾತು ಕೊಟ್ಟ ಬಳಿಕ ಯುವಕ ಟವರ್‌ನಿಂದ ಕೆಳಕ್ಕೆ ಇಳಿದಿದ್ದಾನೆ. ಆತನ ವಿರುದ್ಧ ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments