Tuesday, September 27, 2022
Google search engine
HomeUncategorizedಮಥುರಾ ರೈಲು ನಿಲ್ದಾಣದಲ್ಲಿ ಕಳ್ಳನ ಕೈಚಳಕ, ತಾಯಿಯ ಪಕ್ಕ ಮಲಗಿದ್ದ ಮಗು ಕದ್ದು ಪರಾರಿ!

ಮಥುರಾ ರೈಲು ನಿಲ್ದಾಣದಲ್ಲಿ ಕಳ್ಳನ ಕೈಚಳಕ, ತಾಯಿಯ ಪಕ್ಕ ಮಲಗಿದ್ದ ಮಗು ಕದ್ದು ಪರಾರಿ!

ಮಥುರಾ ರೈಲು ನಿಲ್ದಾಣದಲ್ಲಿ ಕಳ್ಳನ ಕೈಚಳಕ, ತಾಯಿಯ ಪಕ್ಕ ಮಲಗಿದ್ದ ಮಗು ಕದ್ದು ಪರಾರಿ!

ಉತ್ತರ ಪ್ರದೇಶದ ಮಥುರಾದಲ್ಲಿ ರೈಲ್ವೆ ನಿಲ್ದಾಣದಲ್ಲಿ ತಾಯಿಯ ಪಕ್ಕ ಮಲಗಿದ್ದ 7 ತಿಂಗಳ ಮಗುವನ್ನು ವ್ಯಕ್ತಿಯೊಬ್ಬ ಕಳವು ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲೇ ಈ ಘಟನೆ ನಡೆದಿದ್ದು, ಪೊಲೀಸರು ವಿಡಿಯೋವನ್ನು ಶೇರ್‌ ಮಾಡಿದ್ದಾರೆ.

ವ್ಯಕ್ತಿಯೊಬ್ಬ ಪ್ರಯಾಣಿಕರು ಮಲಗಿದ್ದ ಕಡೆ ನಿಧಾನವಾಗಿ ನಡೆದುಕೊಂಡು ಬರುತ್ತಾನೆ. ತುದಿಗಾಲಲ್ಲಿ ಸಪ್ಪಳವಾಗದಂತೆ ಬಂದು ಮಗುವನ್ನು ಎತ್ತಿಕೊಂಡು ಹಾಗೇ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗಿದ್ದಾನೆ.

ಶಂಕಿತನ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕಲು ಮಥುರಾ ರೈಲ್ವೆ ಸ್ಟೇಶನ್‌ನಲ್ಲಿರೋ ಎಲ್ಲಾ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ಈಗಾಗ್ಲೇ ಆರೋಪಿಗಾಗಿ ಬಲೆ ಬೀಸಿರುವ ಪೊಲೀಸರು ಶಂಕಿತನ ಫೋಟೋ ಮತ್ತು ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹರಿಬಿಟ್ಟಿದ್ದಾರೆ. ಹತ್ರಾಸ್‌ ಮತ್ತು ಅಲಿಗಢದಲ್ಲಿ ದಾಳಿ ಸಹ ಮಾಡಿದ್ದಾರೆ. ಮಗುವಿನ ಅಪಹರಣದ ಹಿಂದಿನ ಕಾರಣ ಇನ್ನೂ ಪತ್ತೆಯಾಗಿಲ್ಲ.

 

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments