Friday, October 7, 2022
Google search engine
HomeUncategorizedಮತ್ತೆ ‘ಕಣ್ಣೀರುಳ್ಳಿ’: ಗ್ರಾಹಕರಿಗೆ ಬೆಲೆ ಏರಿಕೆ ಶಾಕ್, ಬೆಳೆ ಹಾನಿಯಿಂದ ರೈತರಿಗೆ ಸಂಕಷ್ಟ; ದರ ಕುಸಿತ...

ಮತ್ತೆ ‘ಕಣ್ಣೀರುಳ್ಳಿ’: ಗ್ರಾಹಕರಿಗೆ ಬೆಲೆ ಏರಿಕೆ ಶಾಕ್, ಬೆಳೆ ಹಾನಿಯಿಂದ ರೈತರಿಗೆ ಸಂಕಷ್ಟ; ದರ ಕುಸಿತ ಆತಂಕ

ಮತ್ತೆ ‘ಕಣ್ಣೀರುಳ್ಳಿ’: ಗ್ರಾಹಕರಿಗೆ ಬೆಲೆ ಏರಿಕೆ ಶಾಕ್, ಬೆಳೆ ಹಾನಿಯಿಂದ ರೈತರಿಗೆ ಸಂಕಷ್ಟ; ದರ ಕುಸಿತ ಆತಂಕ

ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಬೆಳೆ ಭಾರಿ ಮಳೆಯಿಂದಾಗಿ ಹಾನಿಗೀಡಾಗಿದೆ. ಪ್ರತೀ ಎಕರೆಗೆ ಈರುಳ್ಳಿ ಬೆಳೆಯಲು ಸುಮಾರು 50 ಸಾವಿರ ರೂ. ಖರ್ಚಾಗುತ್ತಿದ್ದು, ಬೆಳೆ ಹಾಳಾಗಿರುವುದರಿಂದ ರೈತರಿಗೆ ಆದಾಯ ಕುಸಿತವಾಗಿದೆ. ಎಕರೆಗೆ 17,000 ರೂ.ನಷ್ಟು ಆದಾಯ ಸಿಗುತ್ತಿದೆ.

ಬೆಳೆ ಹಾಳಾಗಿರುವುದರಿಂದ ಅನೇಕ ಬೆಳೆಗಾರರು ದರ ಕುಸಿತದ ಭೀತಿ ಎದುರಿಸುತ್ತಿದ್ದಾರೆ. ಪೂರೈಕೆಯಲ್ಲಿ ವ್ಯತ್ಯಯವಾಗಿ ಗ್ರಾಹಕರಿಗೆ ಬೆಲೆ ಹೆಚ್ಚಳದ ಆತಂಕ ಎದುರಾಗಿದೆ.

ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವ ಕಾರಣ ಈರುಳ್ಳಿಯ ಸಾಕಷ್ಟು ದಾಸ್ತಾನು ಲಭ್ಯವಿದೆ. ಕಳೆದ ವರ್ಷ ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್ ನಲ್ಲಿ ಈರುಳ್ಳಿ ಬಂಪರ್ ಬೆಳೆ ಬಂದಿದ್ದು, ರಫ್ತು ನಿಷೇಧಿಸಿದ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಈರುಳ್ಳಿಯನ್ನು ಸಂಗ್ರಹಿಸಿ ಇಡಲಾಗಿದೆ. ಈರುಳ್ಳಿ ಮಾರುಕಟ್ಟೆಗೆ ಪ್ರವೇಶಿಸಿದರೆ ಬೆಲೆಯಲ್ಲಿ ಹೆಚ್ಚಿನ ಏರಿಳಿತ ಆಗುವುದಿಲ್ಲ.

ಭಾರಿ ಮಳೆಯಿಂದಾಗಿ ಈರುಳ್ಳಿ ಬೆಳೆ ಹಾಳಾಗಿದ್ದು, ಅಳಿದುಳಿದ ಈರುಳ್ಳಿ ತೇವಾಂಶದಿಂದ ರೋಗಕ್ಕೆ ಸಿಲುಕಿ ಹಾಳಾಗುತ್ತಿದೆ. ಇದರಿಂದಾಗಿ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಗ್ರಾಹಕರಿಗೂ ಬೆಲೆ ಏರಿಕೆ ಆತಂಕ ಶುರುವಾಗಿದೆ.

ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಈರುಳ್ಳಿಗೆ 1 ಸಾವಿರ ರೂ.ನಿಂದ 1700 ರೂ.ವರೆಗೆ ದರ ಇದ್ದು, ರಫ್ತು ಮಾಡಲು ಅವಕಾಶ ನೀಡಿದ್ದರೆ ಕ್ವಿಂಟಲ್ ಗೆ 4 -5 ಸಾವಿರ ರೂ. ದರ ಸಿಗುತ್ತಿತ್ತು. ವಿದೇಶಗಳಲ್ಲಿ ಒಂದು ಕೆಜಿ ಈರುಳ್ಳಿ ದರ 400 ರೂಪಾಯಿವರೆಗೆ ಇದೆ. ಕೇಂದ್ರ ಸರ್ಕಾರ ರಫ್ತು ನಿಷೇಧಿಸಿರುವುದರಿಂದ ಈರುಳ್ಳಿ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಹೀಗೆ ಬೆಳೆಗಾರರು ಮತ್ತು ಗ್ರಾಹಕರಿಗೆ ಈರುಳ್ಳಿ ಮತ್ತೆ ಕಣ್ಣೀರು ತರಿಸಲಿದೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments