Wednesday, February 8, 2023
Google search engine
HomeUncategorizedಮಗುವಿಗೆ ಎಣ್ಣೆ ʼಮಸಾಜ್ʼ ಮಾಡುವುದರಿಂದ ಎಷ್ಟೊಂದು ಲಾಭವಿದೆ ಗೊತ್ತಾ….?

ಮಗುವಿಗೆ ಎಣ್ಣೆ ʼಮಸಾಜ್ʼ ಮಾಡುವುದರಿಂದ ಎಷ್ಟೊಂದು ಲಾಭವಿದೆ ಗೊತ್ತಾ….?

ಮಗುವಿಗೆ ಎಣ್ಣೆ ʼಮಸಾಜ್ʼ ಮಾಡುವುದರಿಂದ ಎಷ್ಟೊಂದು ಲಾಭವಿದೆ ಗೊತ್ತಾ….?

ಚಿಕ್ಕ ಮಕ್ಕಳಿಗೆ ಮೈಯೆಲ್ಲಾ ಎಣ್ಣೆ ಹಚ್ಚಿ ಮಸಾಜ್ ಮಾಡಿ ನಂತರ ಕಾಲ ಮೇಲೆ ಹಾಕಿ ಬಿಸಿ ಬಿಸಿ ನೀರು ಸುರಿದು ಸ್ನಾನ ಮಾಡಿಸುವ ಖುಷಿಯನ್ನು ನಾವು ಎಲ್ಲರೂ ಅನುಭವಿಸಿರುತ್ತೇವೆ. ಆದರೆ ಇದರಿಂದ ಮಗುವಿಗೆ ಎಷ್ಟೊಂದು ಲಾಭವಿದೆ ಗೊತ್ತಾ.ನಿದ್ರೆ

ಮಸಾಜ್ ಮಾಡುವುದರಿಂದ ಮಗುವಿಗೆ ಸ್ನಾನವಾದ ನಂತರ ಒಳ್ಳೆಯ ನಿದ್ರೆ ಬರುತ್ತದೆ. ಚಿಕ್ಕ ಮಕ್ಕಳಿಗೆ ನಿದ್ರೆ ತುಂಬಾ ಮುಖ್ಯ. ಯಾಕೆಂದರೆ ಅವರ ಬೆಳವಣಿಗೆ ನಡೆಯುವುದೇ ನಿದ್ರೆಯ ಸಮಯದಲ್ಲಿ. ಹಾಗಾಗಿ ಸುಖ ನಿದ್ರೆ ಅವರ ಆರೋಗ್ಯದ ಗುಟ್ಟು.

ಜೀರ್ಣಕ್ರಿಯೆ

ಒಂದು ನಿರ್ದಿಷ್ಟ ಕ್ರಮದಲ್ಲಿ ಮಸಾಜ್ ಮಾಡುವುದರಿಂದ ಚೆನ್ನಾಗಿ ರಕ್ತ ಸಂಚಾರವಾಗುವುದಲ್ಲದೆ, ಜೀರ್ಣಕ್ರಿಯೆಯೂ ಸುಗಮವಾಗುತ್ತದೆ. ಇನ್ನೂ ಎದ್ದು ಕೂರಲು ಬಾರದ ಮಗುವಿಗೆ ಜೀರ್ಣಕ್ರಿಯೆ ಸುಗಮವಾಗಬೇಕಾದರೆ ಮಸಾಜ್ ಮುಖ್ಯ.

ಸಂಬಂಧ ಗಟ್ಟಿಯಾಗುತ್ತದೆ

ನಿಮಗೇ ಗೊತ್ತಿರುವಂತೆ ಚಿಕ್ಕವರಿದ್ದಾಗ ನಮಗೆ ಎಣ್ಣೆ ಮಸಾಜ್ ಮಾಡಿದ ಕೈಗಳನ್ನು ನಾವು ದೊಡ್ಡವರಾದ ಮೇಲೂ ಮರೆಯಲ್ಲ. ಅದೊಂಥರಾ ಭಾವನಾತ್ಮಕ ನಂಟು ಬೆಳೆಯುತ್ತದೆ. ಅಮ್ಮನ ಬೆಚ್ಚಗಿನ ಕೈಯಿಂದ ಮಸಾಜ್ ಮಾಡುತ್ತಿದ್ದರೆ, ಮಗುವಿಗೆ ಸುರಕ್ಷಿತ ಭಾವನೆ ಉಂಟಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments