Saturday, September 24, 2022
Google search engine
HomeUncategorizedಮಗನಿಗೆ ಜನ ಗಣ ಮನ ಕಲಿಸಿದ ಕೊರಿಯನ್​ ತಾಯಿ; ವಿಡಿಯೋ ವೈರಲ್​

ಮಗನಿಗೆ ಜನ ಗಣ ಮನ ಕಲಿಸಿದ ಕೊರಿಯನ್​ ತಾಯಿ; ವಿಡಿಯೋ ವೈರಲ್​

ಮಗನಿಗೆ ಜನ ಗಣ ಮನ ಕಲಿಸಿದ ಕೊರಿಯನ್​ ತಾಯಿ; ವಿಡಿಯೋ ವೈರಲ್​

ರಾಷ್ಟ್ರಗೀತೆ ಬಗ್ಗೆ ಅಸಡ್ಡೆ ತೋರುವವರು ಒಂದಷ್ಟು ಮಂದಿ ಇದ್ದಾರೆ. ಆದರೆ, ರವೀಂದ್ರ ನಾಥ ಠ್ಯಾಗೋರ್​ ಬರೆದ ಗೀತೆ ಎಷ್ಟು ವಿಶ್ವಮಾನ್ಯ, ಆಪ್ಯಾಯಮಾನ ಎಂಬುದನ್ನು ತೋರಿಸುವ ವಿಡಿಯೋ ಒಂದು ವೈರಲ್​ ಆಗಿದೆ.

ಕೊರಿಯಾದ ತಾಯಿಯೊಬ್ಬರು ತನ್ಮ ಮಗನಿಗೆ ಭಾರತೀಯ ರಾಷ್ಟ್ರಗೀತೆ ಜನ ಗಣ ಮನವನ್ನು ಹೇಗೆ ಹಾಡಬೇಕೆಂದು ಹೇಳಿಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ಕಿಮ್​ ಕೊರಿಯನ್​ ಎಂಬಾಕೆಯ ಪತಿ ಭಾರತೀಯ, ಮತ್ತು ಅವರ ಮಗ ಆದಿ ಎರಡೂ ಸಂಸ್ಕೃತಿಗಳ ಬಗ್ಗೆ ಕಲಿಯುತ್ತ ಬೆಳೆಯುತ್ತಿದ್ದಾನೆ. ಇನ್​ಸ್ಟಾಗ್ರಾಮ್​ ಹ್ಯಾಂಡಲ್​ ಪಾಮ್​ ಕಿಮ್​ ಫಾರೆವರ್​ನಲ್ಲಿ ವಿಡಿಯೊವನ್ನು ಅಪ್​ಲೋಡ್​ ಮಾಡಲಾಗಿದ್ದು, ಅದನ್ನು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹಂಚಿಕೊಳ್ಳಲಾಗಿದೆ. ಈ ವರೆಗೆ ಈ ವಿಡಿಯೋವನ್ನು 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ತಾಯಿ ಮೊದಲು ಜನಗಣಮನ ಹೇಳಿಕೊಡುವಾಗ ಆತ ನಂತರ ಪುನರಾವರ್ತಿಸುತ್ತಾನೆ, ಇಡೀ ಗೀತೆಯನ್ನು ಹೃದಯಾಂತರಾಳದಿಂದ ಹೇಗೆ ನೆನಪಿಸಿಕೊಂಡು ಹಾಡುವುದು ಅದ್ಭುತವಾಗಿದೆ.

ಹಾಡು ಕಲಿಕೆಯ ಕೊನೆಯಲ್ಲಂತೂ ಆ ಮಗು ಎದ್ದು ನಿಂತು ಜೈ ಹಿಂದ್​ ಎಂದು ಸೆಲ್ಯೂಟ್​ ಮಾಡುವುದು ಅದ್ಭುತವಾಗಿದೆ. ಮಗುವಿನ ಮುದ್ದುಮುದ್ದಾದ ತೊದಲು ನುಡಿಗಳನ್ನು ಹೇಳುವುದು ಕಂಡು ಖುಷಿಪಡುವ ಜೊತೆಗೆ ತಾಯಿ ಚಪ್ಪಾಳೆ ಹೊಡೆದು ಪ್ರೋತ್ಸಾಹಿಸುತ್ತಾಳೆ. ನೆಟ್ಟಿಗರು ಈ ವಿಡಿಯೋ ನೋಡಿ ಕಾಮೆಂಟ್​ ಮಳೆಗರೆದಿದ್ದಾರೆ. ಭಾರತದ ಬಗೆಗಿನ ಅಭಿಮಾನವನ್ನು ಕೊಂಡಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments