Saturday, September 24, 2022
Google search engine
HomeUncategorizedಮಕ್ಕಳ ಮೇಲೆ ಅಟ್ಯಾಕ್ ಮಾಡಲು ಗುಂಪಾಗಿ ಬಂದ ನಾಯಿಗಳು; ಬೆಚ್ಚಿಬೀಳಿಸುತ್ತೆ ವಿಡಿಯೋ

ಮಕ್ಕಳ ಮೇಲೆ ಅಟ್ಯಾಕ್ ಮಾಡಲು ಗುಂಪಾಗಿ ಬಂದ ನಾಯಿಗಳು; ಬೆಚ್ಚಿಬೀಳಿಸುತ್ತೆ ವಿಡಿಯೋ

ಮಕ್ಕಳ ಮೇಲೆ ಅಟ್ಯಾಕ್ ಮಾಡಲು ಗುಂಪಾಗಿ ಬಂದ ನಾಯಿಗಳು; ಬೆಚ್ಚಿಬೀಳಿಸುತ್ತೆ ವಿಡಿಯೋ

ಇತ್ತಿಚಿನ ದಿನಗಳ ಒಂದಾದ ಮೇಲೆ ಒಂದು ನಾಯಿ ಕಡಿತದ ಪ್ರಕರಣ ಬೆಳಕಿಗೆ ಬರುತ್ತಲೇ ಇದೆ. ಈಗ ಮತ್ತೆ ಅಂತಹದ್ದೇ ಒಂದು ಪ್ರಕರಣ ಕೇರಳದ ಕಣ್ಣೂರಿನಲ್ಲಿ ನಡೆದಿದ್ದು, ಅದೃಷ್ಟವಶಾತ್ ಮಕ್ಕಳು ನಾಯಿಗಳ ಗುಂಪಿನ ದಾಳಿಯಿಂದ ಜಸ್ಟ್ ಪಾರಾಗಿದ್ದಾರೆ.

ಕೇರಳದ ಕಣ್ಣೂರಿನಲ್ಲಿ ನಡೆದ ಘಟನೆ ಜನರು ಮತ್ತಷ್ಟು ಬೆಚ್ಚಿಬೀಳುವಂತೆ ಮಾಡಿದೆ. ಇಬ್ಬರು ಮಕ್ಕಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ. ಬೀದಿ ನಾಯಿಗಳು ಗುಂಪು ಒಮ್ಮಿಂದೊಮ್ಮೆ ದಾಳಿ ನಡೆಸಿದೆ. ನಾಯಿಗಳು ಇನ್ನೇನು ಕಚ್ಚೇ ಬಿಡುತ್ತೆ ಅಂದುಕೊಂಡು ಮಕ್ಕಳು ಹೆದರಿ ಓಡಿದ್ದಾರೆ. ಆದರೂ ಬಿಡದ ನಾಯಿಗಳ ಗುಂಪು ಅವರನ್ನ ಅಟ್ಟಾಡಿಸಿಕೊಂಡು ಬಂದಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ.

ನಾಯಿಗಳು ಕಚ್ಚುತ್ತೆ ಅನ್ನೊ ಭಯಕ್ಕೆ ಇಬ್ಬರೂ ವಿದ್ಯಾರ್ಥಿಗಳು ಎದ್ನೋ ಬಿದ್ನೊ ಅಂತ ಓಡಿದ್ಧಾರೆ. ಕೊನೆಗೆ ಅಲ್ಲೇ ಇದ್ದ ಕೌಂಪೌಂಡ್ ಒಳಗೆ ಹೋಗಿ ಬಾಗಿಲನ್ನ ಮುಚ್ಚಿಕೊಂಡಿದ್ದಾರೆ. ಅದರಿಂದ ಅವರು ನಾಯಿ ಕಡಿತದಿಂದ ಬಚಾವ್ ಆಗಿದ್ದಾರೆ. ಇಲ್ಲವಾದಲ್ಲಿ ಅವರು ಕೂಡಾ ನಾಯಿ ಕಡಿತಕ್ಕೆ ಒಳಗಾಗುತ್ತಿದ್ದರೋ ಏನೋ. ಆದರೆ ಸಮಯ ಪ್ರಜ್ಞೆಯಿಂದಾಗಿ ಇಬ್ಬರಿಗೂ ಏನೂ ಆಗಿಲ್ಲ.

ಇದೇ ರೀತಿಯ ಘಟನೆ ಕೆಲ ದಿನಗಳಿಂದ ನಡೆಯುತ್ತಿದ್ದು, ಜನರು ಶ್ವಾನಗಳ ಬಳಿ ಸುಳಿಯೋದಕ್ಕೂ ಹೆದರುತ್ತಿದ್ದಾರೆ. ಶ್ವಾನಗಳೆಂದ್ರೆ ಸಾಕು ಜೀವ ಬಾಯಿಗೆ ಬರುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments