Friday, October 7, 2022
Google search engine
HomeUncategorizedಭೇಟಿಯಾದ ಹುಡುಗಿಗೆ ಆಮಿಷವೊಡ್ಡಿ ರೇಪ್: ಪರ ಪುರುಷರೊಂದಿಗೂ ಸೆಕ್ಸ್ ಗೆ ತಾಯಿ, ಮಗ ಬಲವಂತ

ಭೇಟಿಯಾದ ಹುಡುಗಿಗೆ ಆಮಿಷವೊಡ್ಡಿ ರೇಪ್: ಪರ ಪುರುಷರೊಂದಿಗೂ ಸೆಕ್ಸ್ ಗೆ ತಾಯಿ, ಮಗ ಬಲವಂತ

ಭೇಟಿಯಾದ ಹುಡುಗಿಗೆ ಆಮಿಷವೊಡ್ಡಿ ರೇಪ್: ಪರ ಪುರುಷರೊಂದಿಗೂ ಸೆಕ್ಸ್ ಗೆ ತಾಯಿ, ಮಗ ಬಲವಂತ

ನಾಗಪುರ: ಹದಿಹರೆಯದ ಹುಡುಗಿಯ ಮೇಲೆ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಭೋಪಾಲ್ ನ ಯುವಕ ಮತ್ತು ಆತನ ತಾಯಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆ ಮಹಾರಾಷ್ಟ್ರದ ನಾಗ್ಪುರದ ಜಾರಿಪಟ್ಕ ಮೂಲದವರು.

ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿದ್ದ ಬಾಲಕಿ ಮೇ ತಿಂಗಳಲ್ಲಿ ಭೋಪಾಲ್‌ ಗೆ ಹೋಗಿದ್ದು, ಆರೋಪಿ ಅಭಿಷೇಕ್ ಕುರಿಲ್‌ ನನ್ನು ಭೇಟಿಯಾಗಿದ್ದಳು. ಆರೋಪಿ ಸಂಬಂಧದ ಆಮಿಷವೊಡ್ಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಆರೋಪಿಯ ತಾಯಿ ರಜನಿ(45) ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ, ದೂರುದಾರರ ಪ್ರಕಾರ ತಾಯಿ-ಮಗ ಇಬ್ಬರೂ ಇತರ ಪುರುಷರೊಂದಿಗೆ ದೈಹಿಕ ಸಂಬಂಧ ಹೊಂದಲು ಬಾಲಕಿಗೆ ಒತ್ತಾಯಿಸಿದ್ದಾರೆ. ಆರೋಪಿಯು ಆಕೆಯ ಮೊಬೈಲ್ ಫೋನ್ ಕದ್ದ ನಂತರ ಆಕೆಯ ಅಶ್ಲೀಲ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದಾನೆ.

ತಾಯಿ-ಮಗ ಇಬ್ಬರ ವಿರುದ್ಧ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ಸೆಕ್ಷನ್ ಗಳಡಿ ಕೇಸ್ ದಾಖಲಿಸಿದ್ದು, ಅವರನ್ನು ಬಂಧಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಜಾರಿಪಟ್ಕ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments