Thursday, August 11, 2022
Google search engine
HomeUncategorized‘ಭವಿಷ್ಯ ನಿಧಿ’ ಬಿಡುಗಡೆಯಾಗದೆ ಗೊಂದಲದಲ್ಲಿದ್ದ ಸಾರಿಗೆ ನೌಕರರಿಗೆ ಗುಡ್ ನ್ಯೂಸ್

‘ಭವಿಷ್ಯ ನಿಧಿ’ ಬಿಡುಗಡೆಯಾಗದೆ ಗೊಂದಲದಲ್ಲಿದ್ದ ಸಾರಿಗೆ ನೌಕರರಿಗೆ ಗುಡ್ ನ್ಯೂಸ್

‘ಭವಿಷ್ಯ ನಿಧಿ’ ಬಿಡುಗಡೆಯಾಗದೆ ಗೊಂದಲದಲ್ಲಿದ್ದ ಸಾರಿಗೆ ನೌಕರರಿಗೆ ಗುಡ್ ನ್ಯೂಸ್

ಸಾರಿಗೆ ನಿಗಮಗಳ ನೌಕರರ ಭವಿಷ್ಯ ನಿಧಿ ಮೊತ್ತವನ್ನು ರಾಜ್ಯ ಸರ್ಕಾರ ನಿಗದಿತ ಅವಧಿಯೊಳಗೆ ಪಾವತಿ ಮಾಡದ ಹಿನ್ನೆಲೆಯಲ್ಲಿ ನೌಕರರು ಗೊಂದಲಕ್ಕೆ ಸಿಲುಕಿದ್ದರು. ಇದೀಗ ಸರ್ಕಾರ ಅನುದಾನ ಒದಗಿಸಿದ್ದು ಗುಡ್ ನ್ಯೂಸ್ ನೀಡಿದೆ.

ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿಗೆ ಪಾವತಿಸಬೇಕಾದ ಭವಿಷ್ಯ ನಿಧಿಗಾಗಿ 800 ಕೋಟಿ ರೂಪಾಯಿ ಮತ್ತು ಇಂಧನ ವೆಚ್ಚವಾಗಿ 259.27 ಕೋಟಿ ರೂಪಾಯಿ ಸೇರಿದಂತೆ ಒಟ್ಟು 1,059 ಕೋಟಿ ರೂಪಾಯಿಗಳನ್ನು ಶುಕ್ರವಾರದಂದು ಸರ್ಕಾರ ಬಿಡುಗಡೆ ಮಾಡಿದೆ.

ಈ ಅನುದಾನವನ್ನು ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಕ್ಕೆ ಬಳಕೆ ಮಾಡುವಂತಿಲ್ಲ ಎಂಬ ಷರತ್ತನ್ನು ವಿಧಿಸಲಾಗಿದ್ದು, ಹೀಗಾಗಿ ಸಕಾಲಕ್ಕೆ ಭವಿಷ್ಯ ನಿಧಿ ಪಾವತಿಯಾಗದೆ ಗೊಂದಲದಲ್ಲಿದ್ದ ಸಾರಿಗೆ ನೌಕರರು ಈಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments