Tuesday, December 6, 2022
Google search engine
HomeUncategorizedಬೇಡದ ಕರೆಗಳಿಂದ ಬೇಸತ್ತಿರುವಿರಾ ? ಇನ್ನು ಮುಂದೆ ಸ್ಕ್ರೀನ್​ ಮೇಲೆ ಬರಲಿದೆ ಹೆಸರು

ಬೇಡದ ಕರೆಗಳಿಂದ ಬೇಸತ್ತಿರುವಿರಾ ? ಇನ್ನು ಮುಂದೆ ಸ್ಕ್ರೀನ್​ ಮೇಲೆ ಬರಲಿದೆ ಹೆಸರು

ಬೇಡದ ಕರೆಗಳಿಂದ ಬೇಸತ್ತಿರುವಿರಾ ? ಇನ್ನು ಮುಂದೆ ಸ್ಕ್ರೀನ್​ ಮೇಲೆ ಬರಲಿದೆ ಹೆಸರು

Unknown Caller Bothering You? TRAI Likely To Introduce KYC-Based Measures To Ensure Caller's Name Flashes on Receiver's Mobile Phone | 📲 LatestLY

ನವದೆಹಲಿ: ಜಾಹೀರಾತು, ಮಾರ್ಕೆಟಿಂಗ್‌ ಸೇರಿದಂತೆ ಹಲವಾರು ರೀತಿಯಲ್ಲಿ ಬೇಡದ ಕರೆಗಳೇ ಬರುವುದು ಜಾಸ್ತಿ. ಇದರಿಂದ ತಲೆ ಚಿಟ್ಟು ಹಿಡಿದು ಹೋಗುತ್ತಿದೆ. ಆದರೆ ಕರೆಗಳು ಬಂದಾಗ ಅವು ಇಂಥ ಒಲ್ಲದ ಕರೆಗಳು ಎಂದು ತಿಳಿಯುವುದು ಕಷ್ಟ. ಆದರೆ ಈ ಸಮಸ್ಯೆಗೆ ಶೀಘ್ರ ಪರಿಹಾರ ಸಿಗಲಿದೆ.

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್‌ ಇಂಡಿಯಾ (ಟ್ರಾಯ್‌) ಇದಕ್ಕೆ ಪರಿಹಾರ ಕಂಡುಹಿಡಿದಿದ್ದು, ಶೀಘ್ರದಲ್ಲಿಯೇ ಇದು ಜಾರಿಗೆ ತರಲು ಕ್ರಮ ತೆಗೆದುಕೊಂಡಿದೆ.

ಬಳಕೆದಾರರು ಕರೆ ಸ್ವೀಕರಿಸಿದಾಗ ಕರೆ ಮಾಡುವವರ ಹೆಸರು ಫೋನ್ ಪರದೆಯ ಮೇಲೆ ಕಾಣಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಂಡಿದೆ. ಟೆಲಿಕಾಂ ಆಪರೇಟರ್‌ಗಳಲ್ಲಿ ಲಭ್ಯವಿರುವ ಚಂದಾದಾರರ ಕೆವೈಸಿ ದಾಖಲೆಯ ಪ್ರಕಾರ ಹೆಸರು ಕಾಣಿಸಿಕೊಳ್ಳಲಿದೆ.

ಚಂದಾದಾರರು ಕರೆ ಮಾಡಿದವರ ಹೆಸರು ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಸೇವ್‌ ಆಗದೇ ಇದ್ದರೂ ಅವರ ಹೆಸರು ಕಾಣಿಸಿಕೊಳ್ಳಲಿದೆ. ಪ್ರಸ್ತುತ, ಕೆಲವು ಬಳಕೆದಾರರು ಟ್ರೂಕಾಲರ್‌ನಂತಹ ಅಪ್ಲಿಕೇಶನ್‌ಗಳ ಮೂಲಕ ಅಪರಿಚಿತ ಕಾಲರ್‌ನ ಗುರುತನ್ನು ತಿಳಿದುಕೊಳ್ಳುತ್ತಾರೆ. ಆದಾಗ್ಯೂ, ಇದು 100% ದೃಢೀಕರಿಸುವುದಿಲ್ಲ. ಆದರೆ ಟ್ರಾಯ್​ ಸಂಪೂರ್ಣವಾಗಿ ಸರಿಯಾಗಿ ಹೇಳಲಿದೆ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments