Saturday, September 24, 2022
Google search engine
HomeUncategorizedಬೆಚ್ಚಿ ಬೀಳಿಸುವಂತಿದೆ ಈ ಖತರ್ನಾಕ್ ಕಳ್ಳನ ಕಥೆ; 27 ವರ್ಷಗಳ ಅವಧಿಯಲ್ಲಿ ಈತ ಕದ್ದಿದ್ದು ಬರೋಬ್ಬರಿ...

ಬೆಚ್ಚಿ ಬೀಳಿಸುವಂತಿದೆ ಈ ಖತರ್ನಾಕ್ ಕಳ್ಳನ ಕಥೆ; 27 ವರ್ಷಗಳ ಅವಧಿಯಲ್ಲಿ ಈತ ಕದ್ದಿದ್ದು ಬರೋಬ್ಬರಿ 5,000 ಕ್ಕೂ ಅಧಿಕ ಕಾರು…!

ಬೆಚ್ಚಿ ಬೀಳಿಸುವಂತಿದೆ ಈ ಖತರ್ನಾಕ್ ಕಳ್ಳನ ಕಥೆ; 27 ವರ್ಷಗಳ ಅವಧಿಯಲ್ಲಿ ಈತ ಕದ್ದಿದ್ದು ಬರೋಬ್ಬರಿ 5,000 ಕ್ಕೂ ಅಧಿಕ ಕಾರು…!

ಈತನನ್ನು ನಿಸ್ಸಂಶಯವಾಗಿ ದೇಶದ ಅತಿ ದೊಡ್ಡ ಕಾರು ಕಳ್ಳ ಎಂದು ಹೇಳಬಹುದೇನೋ ? ಹಾಗೆ ಬೆಚ್ಚಿ ಬೀಳಿಸುವಂತಿದೆ ಈತನ ಕಥೆ. ಕಳೆದ 27 ವರ್ಷಗಳಿಂದ ಕಾರುಗಳ್ಳತನವನ್ನೇ ತನ್ನ ದಂಧೆಯನ್ನಾಗಿಸಿಕೊಂಡಿದ್ದ ಈತ ಈ ಅವಧಿಯಲ್ಲಿ ಬರೋಬ್ಬರಿ 5000ಕ್ಕೂ ಅಧಿಕ ಕಾರುಗಳನ್ನು ಕಳವು ಮಾಡಿದ್ದಾನೆ. ಅಷ್ಟೇ ಅಲ್ಲ, ಕಾರು ಕಳವು ಮಾಡುವ ವೇಳೆ ಕೆಲ ಟ್ಯಾಕ್ಸಿ ಚಾಲಕರನ್ನೂ ಹತ್ಯೆ ಮಾಡಿದ್ದಾನೆ.

ಅಂದ ಹಾಗೆ ಈ ಕಾರು ಕಳ್ಳನ ಹೆಸರು ಅನಿಲ್. 52 ವರ್ಷದ ಈತ ಕೊನೆಗೂ ದೆಹಲಿ ವಿಶೇಷ ದಳದ ಪೊಲೀಸರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮುಂಬೈ, ಬೆಂಗಳೂರು, ದೆಹಲಿ ಸೇರಿದಂತೆ ದೇಶದ ಎಲ್ಲ ಮಹಾನಗರಗಳಲ್ಲಿ ಕಾರು ಕಳವು ಮಾಡಿದ್ದ ಈತ ತನ್ನದೇ ನೆಟ್ವರ್ಕ್ ಮೂಲಕ ಇವುಗಳನ್ನು ಮಾರಾಟ ಮಾಡುತ್ತಿದ್ದ. ಐಷಾರಾಮಿ ಜೀವನ ನಡೆಸುತ್ತಿರುವ ಈತ ಮಹಾನಗರಗಳಲ್ಲಿ ಆಸ್ತಿಯನ್ನೂ ಖರೀದಿಸಿದ್ದಾನೆ. ಪ್ರಸ್ತುತ ಅಸ್ಸಾಂನಲ್ಲಿ ವಾಸವಾಗಿದ್ದ ಈತನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಆಟೋ ಚಾಲಕನಾಗಿ ದೆಹಲಿಗೆ ಬಂದಿದ್ದ ಅನಿಲ್, ಐಷಾರಾಮಿ ಜೀವನಕ್ಕಾಗಿ ಕಾರು ಕಳವು ಮಾಡುವುದನ್ನು ಆರಂಭಿಸಿದ್ದ. ಅಂದು ಮಾರುತಿ 800 ಕಾರ್ ಗಳು ಜನಪ್ರಿಯ ಬ್ರಾಂಡ್ ಆಗಿದ್ದು ಇವುಗಳನ್ನೇ ಹೆಚ್ಚಾಗಿ ಕದ್ದು, ಮಾರಾಟ ಮಾಡುತ್ತಿದ್ದ. ಸದ್ಯ ಈತನಿಗೆ ಮೂವರು ಪತ್ನಿಯರು, ಹಾಗೂ 7 ಮಕ್ಕಳು ಇದ್ದು ಅಸ್ಸಾಂನಲ್ಲಿರುವ ಭವ್ಯ ಬಂಗಲೆಯಲ್ಲಿ ವಾಸಿಸುತ್ತಿದ್ದ. ಒಮ್ಮೆ ಬಂಧನಕ್ಕೊಳಗಾಗಿದ್ದರೂ ಸಹ ಜಾಮೀನಿನ ಮೇಲೆ ಹೊರಬಂದು ಮತ್ತೆ ಅದೇ ದಂಧೆ ಮುಂದುವರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ವಿರುದ್ಧ ಇಲ್ಲಿಯವರೆಗೆ 180ಕ್ಕೂ ಹೆಚ್ಚು ಕೇಸುಗಳು ದಾಖಲಾಗಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments