Thursday, August 11, 2022
Google search engine
HomeUncategorizedಬೂಟಿನಲ್ಲಿ ಅಡಗಿತ್ತು ಭಾರೀ ಗಾತ್ರದ ನಾಗರಹಾವು: ವಿಡಿಯೋ ವೈರಲ್‌

ಬೂಟಿನಲ್ಲಿ ಅಡಗಿತ್ತು ಭಾರೀ ಗಾತ್ರದ ನಾಗರಹಾವು: ವಿಡಿಯೋ ವೈರಲ್‌

ಬೂಟಿನಲ್ಲಿ ಅಡಗಿತ್ತು ಭಾರೀ ಗಾತ್ರದ ನಾಗರಹಾವು: ವಿಡಿಯೋ ವೈರಲ್‌

ಹಾವು ಕಂಡ್ರೆ ಸಾಮಾನ್ಯವಾಗಿ ಎಲ್ಲರೂ ಭಯಪಡ್ತಾರೆ. ಅದರಲ್ಲೂ ಮನೆಯ ಒಳಗಡೆಯೇನಾದ್ರೂ ಹಾವು ಸೇರಿಕೊಂಡುಬಿಟ್ಟರೆ ಹೆದರಿ ಕಂಗಾಲಾಗೋದು ನಿಶ್ಚಿತ. ಮಳೆಗಾಲದಲ್ಲಿ ಹಾವುಗಳ ಕಾಟ ಸ್ವಲ್ಪ ಜಾಸ್ತಿ. ಇದೀಗ ವ್ಯಕ್ತಿಯೊಬ್ಬನ ಬೂಟಿನಲ್ಲಿ ಭಾರೀ ಗಾತ್ರದ ನಾಗರಹಾವೊಂದು ಅಡಗಿರೋದು ಪತ್ತೆಯಾಗಿದೆ.

ಹಾವನ್ನು ಸೆರೆ ಹಿಡಿದಿರುವ ವಿಡಿಯೋ ಕೂಡ ಇಂಟರ್ನೆಟ್‌ ನಲ್ಲಿ ವೈರಲ್‌ ಆಗಿದೆ. ಅರಣ್ಯ ಅಧಿಕಾರಿ ಸುಶಾಂತ್‌ ನಂದಾ ಈ ವಿಡಿಯೋವನ್ನು ಶೇರ್‌ ಮಾಡಿದ್ದಾರೆ. ಬೂಟಿನಲ್ಲಿ ಅಡಗಿದ್ದ ಹಾವನ್ನು ತರಬೇತಿ ಪಡೆದ ಅರಣ್ಯ ಸಿಬ್ಬಂದಿ ಸೆರೆಹಿಡಿದಿದ್ದಾರೆ.

ಈ ವೇಳೆ ನಾಗರಹಾವು ಆ ಮಹಿಳೆ ಮೇಲೆ ದಾಳಿ ಮಾಡಲು ಯತ್ನಿಸಿದೆ. ವಿಡಿಯೋ ಹಂಚಿಕೊಂಡಿರೋ ಅರಣ್ಯಾಧಿಕಾರಿ ಸುಶಾಂತ್‌ ನಂದಾ, ಮಳೆಗಾಲದಲ್ಲಿ ಹಾವುಗಳು ಎಲ್ಲೆಂದರಲ್ಲಿ ಅಡಗಿರುತ್ತವೆ. ಹಾಗಾಗಿ ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಹಾವು ಪತ್ತೆಯಾದ ಬಗ್ಗೆ ಮಾಹಿತಿ ನೀಡಿದ್ರೆ ನುರಿತ ಸಿಬ್ಬಂದಿ ಅದನ್ನು ಸೆರೆಹಿಡಿಯುತ್ತಾರೆ ಅಂತಾನೂ ಹೇಳಿದ್ದಾರೆ.

 

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments