Friday, March 24, 2023
Google search engine
HomeUncategorizedಬಾಡಿಗೆ ಮನೆ ಮುಂಗಡ ಪಾವತಿಸಲು ಕಿಡ್ನಿ ಮಾರಾಟಕ್ಕೆ….! ತಮಾಷೆಯಾದರೂ ನೈಜ ಸಮಸ್ಯೆಯನ್ನು ಬಿಂಬಿಸುತ್ತೆ ಈ ಪೋಸ್ಟ್

ಬಾಡಿಗೆ ಮನೆ ಮುಂಗಡ ಪಾವತಿಸಲು ಕಿಡ್ನಿ ಮಾರಾಟಕ್ಕೆ….! ತಮಾಷೆಯಾದರೂ ನೈಜ ಸಮಸ್ಯೆಯನ್ನು ಬಿಂಬಿಸುತ್ತೆ ಈ ಪೋಸ್ಟ್

ಬಾಡಿಗೆ ಮನೆ ಮುಂಗಡ ಪಾವತಿಸಲು ಕಿಡ್ನಿ ಮಾರಾಟಕ್ಕೆ….! ತಮಾಷೆಯಾದರೂ ನೈಜ ಸಮಸ್ಯೆಯನ್ನು ಬಿಂಬಿಸುತ್ತೆ ಈ ಪೋಸ್ಟ್

ಬೆಂಗಳೂರಲ್ಲಿ ಮನೆ ಬಾಡಿಗೆ ಪಡೆಯೋದು ಹರಸಾಹಸ. ದೊಡ್ಡ ದೊಡ್ಡ ನಗರಗಳಾದ ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ಸಿಟಿಯಲ್ಲಿ ಮನೆ ಬಾಡಿಗೆ ಸೇರಿದಂತೆ ಭದ್ರತಾ ಠೇವಣಿ ಮೊತ್ತ ಭರಿಸುವುದು ಎಷ್ಟು ಕಷ್ಟ ಎಂಬುದನ್ನ ವ್ಯಕ್ತಿಯೊಬ್ರು ಪೋಸ್ಟ್ ವೊಂದನ್ನು ಹಂಚಿಕೊಳ್ಳುವ ಮೂಲಕ ಹೊರಹಾಕಿದ್ದಾರೆ. ಆ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

“ಎಡ ಕಿಡ್ನಿ ಮಾರಾಟಕ್ಕಿದೆ. ಮನೆ ಬಾಡಿಗೆದಾತರು ಕೇಳುತ್ತಿರುವ ಭದ್ರತಾ ಠೇವಣಿ ಮೊತ್ತಕ್ಕೆ ಹಣ ಬೇಕು” ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ. ಇದು ಕೇವಲ ತಮಾಷೆ ಎಂದು ಹೇಳಿದ್ದು, ಈ ರೀತಿ ಜಾಹೀರಾತು ನೀಡಿರುವವರು ಬೆಂಗಳೂರಿನ ಇಂದಿರಾನಗರದಲ್ಲಿ ಬಾಡಿಗೆಗೆ ಮನೆಯನ್ನು ಹುಡುಕುತ್ತಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ.

ಆದರೆ ಈ ಪೋಸ್ಟ್ ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕುವ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಅವರು ತರುವ ಹಣಕ್ಕಿಂತ ಹೆಚ್ಚಿನದನ್ನು ಪಾವತಿಸಲು ಒತ್ತಾಯಿಸುವುದನ್ನ ಸೂಚಿಸುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments