Tuesday, December 6, 2022
Google search engine
HomeUncategorizedಬಸ್​ ನಿಲ್ಲಿಸಿ ಬಾಲಕರ ರೀಲ್ಸ್​: ಶಿಕ್ಷೆ ರೂಪದಲ್ಲಿ 2 ದಿನ ಟ್ರಾಫಿಕ್​ ಕಂಟ್ರೋಲ್ ಮಾಡಲು ಸೂಚನೆ​

ಬಸ್​ ನಿಲ್ಲಿಸಿ ಬಾಲಕರ ರೀಲ್ಸ್​: ಶಿಕ್ಷೆ ರೂಪದಲ್ಲಿ 2 ದಿನ ಟ್ರಾಫಿಕ್​ ಕಂಟ್ರೋಲ್ ಮಾಡಲು ಸೂಚನೆ​

ಬಸ್​ ನಿಲ್ಲಿಸಿ ಬಾಲಕರ ರೀಲ್ಸ್​: ಶಿಕ್ಷೆ ರೂಪದಲ್ಲಿ 2 ದಿನ ಟ್ರಾಫಿಕ್​ ಕಂಟ್ರೋಲ್ ಮಾಡಲು ಸೂಚನೆ​

ಚೆನ್ನೈ: ಈಗ ರೀಲ್ಸ್​ ಹುಚ್ಚು ಯುವಕರನ್ನು ಬಹಳ ಹುಚ್ಚರನ್ನಾಗಿ ಮಾಡಿದ್ದು, ಅದಕ್ಕಾಗಿ ಏನು ಬೇಕಾದರೂ ಮಾಡಲು ತಯಾರಿದ್ದಾರೆ. ಇಬ್ಬರು ಅಪ್ರಾಪ್ತರು ಸಿಟಿ ಬಸ್​ ಅನ್ನೇ ನಿಲ್ಲಿಸಿ ಸಂಚಾರ ಅಸ್ತವ್ಯಸ್ತ ಮಾಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಈ ಇಬ್ಬರು ಬಾಲಕರು ತಾವು ಬಂದಿದ್ದ ಬಸ್​ ಅನ್ನು ಅಲ್ಲಿಯೇ ನಿಲ್ಲಿಸಿದ್ದಾರೆ. ಎನ್ನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರುವೊಟ್ಟಿಯೂರು ಮತ್ತು ಪೊನ್ನುಮಲೈ ನಡುವೆ ಸಂಚರಿಸುತ್ತಿದ್ದ ಬಸ್​ ಅನ್ನು ಒಬ್ಬಾತ ನಿಲ್ಲಿಸಿದರೆ, ಇನ್ನೊಬ್ಬಾತ ಅದರ ವಿಡಿಯೋ ಮಾಡಿದ್ದಾನೆ. ಇದನ್ನು ರೀಲ್ಸ್​ ಮಾಡಿ ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಸ್ವಲ್ಪ ಹೆಚ್ಚೂ ಕಡಿಮೆ ಆದರೂ ಬಸ್​ ಅಡಿಯಾಗುವ ಸಾಧ್ಯತೆ ಇತ್ತು, ಮಾತ್ರವಲ್ಲದೇ ಆ ಜಾಗದಲ್ಲಿ ಟ್ರಾಫಿಕ್​ ಜಾಂ ಉಂಟಾಯಿತು.

ಇದರ ವಿಡಿಯೋ ವೈರಲ್​ ಆಗುತ್ತಲೇ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಅವರಿಗೆ ಶಿಕ್ಷೆಯ ರೂಪದಲ್ಲಿ ಎರಡು ದಿನಗಳು ಟ್ರಾಫಿಕ್​ ನಿಯಂತ್ರಣ ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ. ನಂತರ ಅವರಿಗೆ ಎಚ್ಚರಿಕೆ ನೀಡಿ ದಂಡ ವಿಧಿಸಿ ಮನೆಗೆ ಕಳುಹಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments