Thursday, August 11, 2022
Google search engine
HomeUncategorizedಫ್ರಿಡ್ಜ್‌ ಹೊತ್ತೊಯ್ಯುವಂತೆ ಚಾಲಕನ ಮೇಲೆ ಒತ್ತಡ ಹಾಕಲು ಮಹಿಳೆ ಮಾಡಿದ್ದಾಳೆ ಇಂಥಾ ಖತರ್ನಾಕ್‌ ಕೆಲಸ….!

ಫ್ರಿಡ್ಜ್‌ ಹೊತ್ತೊಯ್ಯುವಂತೆ ಚಾಲಕನ ಮೇಲೆ ಒತ್ತಡ ಹಾಕಲು ಮಹಿಳೆ ಮಾಡಿದ್ದಾಳೆ ಇಂಥಾ ಖತರ್ನಾಕ್‌ ಕೆಲಸ….!

ಫ್ರಿಡ್ಜ್‌ ಹೊತ್ತೊಯ್ಯುವಂತೆ ಚಾಲಕನ ಮೇಲೆ ಒತ್ತಡ ಹಾಕಲು ಮಹಿಳೆ ಮಾಡಿದ್ದಾಳೆ ಇಂಥಾ ಖತರ್ನಾಕ್‌ ಕೆಲಸ….!

ವಯಸ್ಸಾದ ಮಹಿಳೆಯೊಬ್ಬಳು ಅಂಗಡಿಯಿಂದ ಕೊಂಡು ತಂದಿದ್ದ ರೆಫ್ರಿಜರೇಟರ್‌ ಅನ್ನು ಮನೆಯೊಳಕ್ಕೆ ಕೊಂಡೊಯ್ಯಲಾಗದೇ ಡ್ರೈವರ್‌ ಬಳಿಯೇ ಆ ಕೆಲಸ ಮಾಡಿಸಲು ಹೈಡ್ರಾಮಾ ಮಾಡಿದ್ದಾಳೆ. ಫ್ರಿಡ್ಜ್‌ ಖರೀದಿಸಿದ ಮಹಿಳೆ ಅದನ್ನು ಡೆಲಿವರಿ ವಾಹನವೊಂದರಲ್ಲಿ ಹಾಕಿಕೊಂಡು ಬಂದಿದ್ದಾಳೆ.

ನಿಯಮದಂತೆ ಫ್ರಿಡ್ಜ್‌ ಅನ್ನು ವಾಹನ ಚಾಲಕ ಮನೆ ಬಳಿ ಇಳಿಸಿ ಹೋಗಬೇಕು. ಆತ ಹಾಗೆಯೇ ಮಾಡಿದ್ದಾನೆ. ಆದ್ರೆ ಭಾರವಾದ ಫ್ರಿಡ್ಜ್‌ ಅನ್ನು ಮನೆಯೊಳಕ್ಕೆ ಕೊಂಡೊಯ್ಯಲು ಮಹಿಳೆಗೆ ಸಾಧ್ಯವಾಗ್ತಿರಲಿಲ್ಲ. ಟ್ರಾಲಿ ಕೂಡ ಇರಲಿಲ್ಲ. ಹಾಗಾಗಿ ಮಹಿಳೆ ಚಾಲಕನ ಮೇಲೆ ಒತ್ತಡ ಹೇರಲು ವಾಹನದ ಮಧ್ಯೆ ಮಲಗಿ ಬಿಟ್ಟಿದ್ದಾಳೆ.

ಟೈರ್‌ ಪಕ್ಕದಲ್ಲೇ ಮಲಗಿ ನಾಟಕ ಶುರು ಮಾಡಿದ್ದಾಳೆ. ಸಿಟ್ಟಿಗೆದ್ದ ಚಾಲಕ ಮಹಿಳೆಯ ವರ್ತನೆಯನ್ನು ಪ್ರಶ್ನಿಸಿದ್ದಾನೆ. ಆಗ ಫ್ರಿಡ್ಜ್‌ ಅನ್ನು ಮನೆಯೊಳಕ್ಕೆ ತಂದು ಕೊಡುವಂತೆ ಡಿಮ್ಯಾಂಡ್‌ ಮಾಡಿದ್ದಾಳೆ. ಅತ ಅದಕ್ಕೆ ಒಪ್ಪಿಲ್ಲ. ಈ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದ್ದು, 25 ಮಿಲಿಯನ್‌ಗೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ.

ಚಾಲಕ ಮಹಿಳೆಗೆ ಸಹಾಯ ಮಾಡಬಹುದಿತ್ತು ಎಂದು ಒಂದಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಆದ್ರೆ ಬಿಟ್ಟಿಯಾಗಿ ಅವನ್ಯಾಕೆ ಅಷ್ಟು ಕಷ್ಟದ ಕೆಲಸ ಮಾಡಬೇಕು ಎಂದು ಕೆಲವರು ಪ್ರಶ್ನಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments