Thursday, August 11, 2022
Google search engine
HomeUncategorizedಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪಾಸಾದ ವಿದ್ಯಾರ್ಥಿನಿಯಿಂದ ಶಿಕ್ಷಕಿಗೆ ಕ್ಲಾಸ್‌….!

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪಾಸಾದ ವಿದ್ಯಾರ್ಥಿನಿಯಿಂದ ಶಿಕ್ಷಕಿಗೆ ಕ್ಲಾಸ್‌….!

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪಾಸಾದ ವಿದ್ಯಾರ್ಥಿನಿಯಿಂದ ಶಿಕ್ಷಕಿಗೆ ಕ್ಲಾಸ್‌….!

ಎರಡು ದಿನಗಳ ಹಿಂದಷ್ಟೇ ಕೇಂದ್ರೀಯ ಪಠ್ಯಕ್ರಮದ ಬೋರ್ಡ್ ಫಲಿತಾಂಶ ಪ್ರಕಟವಾಗಿದೆ, ಈ ಸಂದರ್ಭದಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯಿಂದ ಬೈಸಿಕೊಂಡಿರುವ ಪ್ರಸಂಗದ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿದ್ಯಾರ್ಥಿನಿ ಎರಡು ವರ್ಷದ ಹಿಂದೆ ತನ್ನ ಗೆಳತಿ ಜೊತೆ ಸೇರಿ ಶಿಕ್ಷಕಿಗೆ ಬೈಯುಲು ತೀರ್ಮಾನಿಸಿದ್ದನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಫಲಿತಾಂಶ ಪ್ರಕಟವಾದ ದಿನ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಧನ್ಯವಾದ ಅರ್ಪಿಸುವುದು ಸರ್ವೇ ಸಾಮಾನ್ಯ. ಆದರೆ ಇದೊಂದು ಅಪರೂಪ ಮತ್ತು ವಿಲಕ್ಷಣ ಎಂಬಂತೆ ವಿದ್ಯಾರ್ಥಿನಿಯು ಶಿಕ್ಷಕಿಗೆ ವಾಟ್ಸಪ್ ಮೆಸೇಜ್ ಮಾಡಿ ತರಾಟೆಗೆ ತೆಗೆದುಕೊಂಡಿರುವಂತಿದೆ.

ಈ ವಿಡಿಯೋ ನೋಡಿ ʼರಾಕಿ ಭಾಯ್‌ʼ ತದ್ರೂಪಿ ಅಂತಿದ್ದಾರೆ ನೆಟ್ಟಿಗರು….!

ಸಾಧ್ಯವಿರುವ ಪ್ರತಿ ಹಂತದಲ್ಲೂ ತನ್ನನ್ನು ಹೇಗೆ ಕೆಳಮಟ್ಟಕ್ಕಿಳಿಸಲಾಯಿತು ಎಂದು ಮೆಸೇಜ್‌ನಲ್ಲಿ ಹರಿಹಾಯ್ದಿದ್ದು, ಮುಂದಿನ ಬಾರಿ, ದಯವಿಟ್ಟು ಬೇರೆಯವರಿಗೆ ದಯೆ ತೋರಲು ಮರೆಯದಿರಿ. ವಿಶೇಷವಾಗಿ ನಿಮ್ಮ ಸಹಾಯವನ್ನು ಬಯಸುವ ವಿದ್ಯಾರ್ಥಿಗಳಿಗೆ ಎಂದು ಮಾತಿನಲ್ಲೇ ತಿವಿಯಲಾಗಿದೆ.

ತಾನು ಉತ್ತೀರ್ಣ ಆಗುವುದೇ ಇಲ್ಲ ಎಂದಿದ್ದಿರಿ, ಆದರೆ ಕ್ಲಾಸ್ 12 ಕೂಡ ಪಾಸ್ ಆಗಿದ್ದು, ವಿಶ್ವವಿದ್ಯಾಯದಲ್ಲಿ ಕೂಡ ಪ್ರವೇಶ ಸಿಕ್ಕಿದೆ ಎಂದು ಶಿಕ್ಷಕಿಯನ್ನು ಕೆಣಕಲಾಗಿದೆ.

ಸ್ಕ್ರೀನ್ ಶಾಟ್ ವೈರಲ್ ಆಗಿದ್ದು, ನೂರಾರು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಒಬ್ಬರು ಪ್ರತಿಕ್ರಿಯಿಸಿ ನನಗೆ 5 ವರ್ಷ ವಯಸ್ಸಿದ್ದಾಗ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಓದುವುದಿಲ್ಲ ಎಂದು ಭಾವಿಸಿ ಕಾನ್ವೆಂಟ್‌ನಲ್ಲಿ ಪ್ರತಿದಿನ ನನ್ನನ್ನು ಹೊಡೆಯಲಾಗುತ್ತಿತ್ತು. ನಾನೇ ಶಿಕ್ಷಕನಾದೆ, ನನ್ನಂತೆಯೇ ಇರುವ ಮಕ್ಕಳು ಎಂದಿಗೂ ಅವಮಾನ ಸಹಿಸಲ್ಲ ಎಂಬುದು ನನಗೆ ಅರ್ಥವಾಗಿದೆ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments