Thursday, August 11, 2022
Google search engine
HomeUncategorizedಪ್ರೊಫೈಲ್ ಚಿತ್ರ ಬದಲಿಸಿದ ಪ್ರಧಾನಿ ಮೋದಿ; ‘ಹರ್ ಘರ್ ತಿರಂಗಾಕ್ಕೆ ಸಜ್ಜಾದ ರಾಷ್ಟ್ರ’

ಪ್ರೊಫೈಲ್ ಚಿತ್ರ ಬದಲಿಸಿದ ಪ್ರಧಾನಿ ಮೋದಿ; ‘ಹರ್ ಘರ್ ತಿರಂಗಾಕ್ಕೆ ಸಜ್ಜಾದ ರಾಷ್ಟ್ರ’

ಪ್ರೊಫೈಲ್ ಚಿತ್ರ ಬದಲಿಸಿದ ಪ್ರಧಾನಿ ಮೋದಿ; ‘ಹರ್ ಘರ್ ತಿರಂಗಾಕ್ಕೆ ಸಜ್ಜಾದ ರಾಷ್ಟ್ರ’

ನವದೆಹಲಿ: ಪ್ರಧಾನಿ ಮೋದಿ ಅವರು ಮಂಗಳವಾರ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ ಗಳಲ್ಲಿ ತಮ್ಮ ಪ್ರೊಫೈಲ್ ಚಿತ್ರವನ್ನು ‘ತಿರಂಗಾ’ಕ್ಕೆ ಎಂದು ಬದಲಾಯಿಸಿದ್ದಾರೆ. ಟ್ವಿಟರ್ ಪ್ರೊಫೈಲ್ ಚಿತ್ರವನ್ನು ರಾಷ್ಟ್ರಧ್ವಜಕ್ಕೆ ಬದಲಾಯಿಸಿದ ಪ್ರಧಾನಿ ಮೋದಿ ಅವರು ಹರ್ ಘರ್ ತಿರಂಗಕ್ಕೆ ರಾಷ್ಟ್ರ ಸಜ್ಜಾಗಿದೆ ಎಂದು ಹೇಳಿದ್ದಾರೆ.

ಇಂದು ವಿಶೇಷವಾದ 2ನೇ ಆಗಸ್ಟ್! ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ, ನಮ್ಮ ರಾಷ್ಟ್ರವು ನಮ್ಮ ತ್ರಿವರ್ಣ ಧ್ವಜವನ್ನು ಆಚರಿಸುವ ಒಂದು ಸಾಮೂಹಿಕ ಆಂದೋಲನವಾದ #HarGharTiranga ಗೆ ಸಿದ್ಧವಾಗಿದೆ. ನಾನು ನನ್ನ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ DP ಅನ್ನು ಬದಲಾಯಿಸಿದ್ದೇನೆ ನೀವೆಲ್ಲರೂ ಅದೇ ರೀತಿ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಟ್ವೀಟ್ ಮಾಡಿದ್ದಾರೆ.

ಭಾನುವಾರ, ತಮ್ಮ ಮಾಸಿಕ ಕಾರ್ಯಕ್ರಮ ‘ಮನ್ ಕಿ ಬಾತ್’ ಪ್ರಸಾರದ ಸಂದರ್ಭದಲ್ಲಿ, ಪಿಎಂ ನರೇಂದ್ರ ಮೋದಿ ಅವರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಅಥವಾ ಪ್ರದರ್ಶಿಸುವ ಮೂಲಕ ‘ಹರ್ ಘರ್ ತಿರಂಗ’ ಅಭಿಯಾನವನ್ನು ಸಾಮೂಹಿಕ ಆಂದೋಲನವಾಗಿ ಪರಿವರ್ತಿಸುವಂತೆ ಎಲ್ಲಾ ನಾಗರಿಕರಿಗೆ ಕರೆ ನೀಡಿದರು.

ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಆಗಸ್ಟ್ 2 ಮತ್ತು ಆಗಸ್ಟ್ 15 ರ ನಡುವೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ‘ತಿರಂಗ’ವನ್ನು ಪ್ರದರ್ಶನ ಚಿತ್ರವಾಗಿ ಬಳಸಬೇಕೆಂದು ತಿಳಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments