Sunday, September 25, 2022
Google search engine
HomeUncategorizedಪ್ರೀತಿ – ಮದುವೆಗೆ ಕಾರಣವಾಯ್ತು ಬೆಂಗಳೂರು ಟ್ರಾಫಿಕ್​….!

ಪ್ರೀತಿ – ಮದುವೆಗೆ ಕಾರಣವಾಯ್ತು ಬೆಂಗಳೂರು ಟ್ರಾಫಿಕ್​….!

ಪ್ರೀತಿ – ಮದುವೆಗೆ ಕಾರಣವಾಯ್ತು ಬೆಂಗಳೂರು ಟ್ರಾಫಿಕ್​….!

ಬೆಳೆಯುತ್ತಿರುವ ಬೆಂಗಳೂರಿಗೆ ಟ್ರಾಫಿಕ್​ ಜಾಮ್​ ದೊಡ್ಡ ಸಮಸ್ಯೆಯಾಗುತ್ತಿದೆ. ಅದೇ ರೀತಿ ಸ್ಟ್ಯಾಂಡ್​-ಅಪ್​ ಕಾಮಿಡಿಯನ್​ಗಳು ಬೆಂಗಳೂರಿನ ಬಗ್ಗೆ ಮಾಡುವ ಅನೇಕ ಹಾಸ್ಯಗಳಲ್ಲಿ, ಟ್ರಾಫಿಕ್​ ಜಾಮ್​ಗಳಲ್ಲಿ ಸಿಲುಕಿಕೊಳ್ಳುವುದು ಪ್ರಮುಖ ತಮಾಷೆಯಾಗಿರುತ್ತದೆ. ಹಿಂದೆ ಅನೇಕ ಘಟನೆಗಳು ವೈರಲ್​ ಆಗಿದ್ದವು. ಆದರೆ, ಟ್ರಾಫಿಕ್​ ಜಾಮ್​ನಲ್ಲಿ ಸಿಕ್ಕಿಹಾಕಿಕೊಂಡು ಅರಳಿದ ಒಂದು ಪ್ರೇಮಕಥೆಯ ಪೋಸ್ಟ್​ ವೈರಲ್​ ಆಗಿದೆ.

ಟ್ವಿಟರ್​ನಲ್ಲಿ ಹಂಚಿಕೊಂಡ, ಪ್ರಾಥಮಿಕವಾಗಿ ರೆಡ್ಡಿಟ್​ನಲ್ಲಿ ಹಂಚಿಕೊಂಡ ಪೋಸ್ಟ್​ ಕಥೆಯ ಸಾರಾಂಶವನ್ನು ನೀಡಿದೆ. ಆ ವ್ಯಕ್ತಿ ಸೋನಿ ವರ್ಲ್ಡ್​ ಸಿಗ್ನಲ್​ ಬಳಿ ತನ್ನ ಜೊತೆಗಾತಿಯನ್ನು ಹೇಗೆ ಭೇಟಿಯಾದರು ಎಂದು ಬರೆದಿದ್ದಾರೆ.

ನಿರ್ಮಾಣ ಹಂತದಲ್ಲಿರುವ ಈಜಿಪುರ ಮೇಲ್ಸೇತುವೆಯಿಂದ ಉಂಟಾದ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿಕೊಂಡಿದ್ದು, ನಿರಾಶೆಗೊಂಡು ಮತ್ತು ಹಸಿವಿನಿಂದ ಬೇರೆಡೆಗೆ ಹೋಗಿ ಹತ್ತಿರದಲ್ಲೇ ಊಟ ಮಾಡಿದೆವು ಎಂದು ಪೋಸ್ಟ್​ನಲ್ಲಿದೆ.

ನಾನು ಅವಳೊಂದಿಗೆ 3 ವರ್ಷಗಳಿಂದ ಡೇಟಿಂಗ್​ ಮಾಡಿದ್ದೇನೆ ಮತ್ತು 2 ವರ್ಷಗಳ ಕಾಲ ಮದುವೆಯಾಗಿದ್ದೇನೆ, ಆದರೆ 2.5 ಕಿಮೀ ಫ್ರೈ ಓವರ್​ ಇನ್ನೂ ನಿರ್ಮಾಣ ಹಂತದಲ್ಲಿದೆ ಎಂದು ಅವರು ಹಾಸ್ಯಮಾಡಿದ್ದಾರೆ.

ಟ್ವಿಟರ್​ ಪೋಸ್ಟ್​ 4 ಸಾವಿರಕ್ಕೂ ಹೆಚ್ಚು ಲೈಕ್​ ಮತ್ತು ಸಾಕಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಜನರು ಈ ಟ್ರಾಫಿಕ್​ ಪ್ರೇಮಕಥೆಯನ್ನು ಇಷ್ಟಪಟ್ಟಿದ್ದು, ತಮ್ಮ ಅನುಭವಗಳನ್ನು ಬರೆದುಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments