Friday, October 7, 2022
Google search engine
HomeUncategorizedಪ್ರವಾಸಿಗರೇ ಗಮನಿಸಿ: ಈ ದಿನಗಳಂದು ಮೈಸೂರು ಅರಮನೆಗೆ ಇರುವುದಿಲ್ಲ ಪ್ರವೇಶ

ಪ್ರವಾಸಿಗರೇ ಗಮನಿಸಿ: ಈ ದಿನಗಳಂದು ಮೈಸೂರು ಅರಮನೆಗೆ ಇರುವುದಿಲ್ಲ ಪ್ರವೇಶ

ಪ್ರವಾಸಿಗರೇ ಗಮನಿಸಿ: ಈ ದಿನಗಳಂದು ಮೈಸೂರು ಅರಮನೆಗೆ ಇರುವುದಿಲ್ಲ ಪ್ರವೇಶ

ವಿಶ್ವ ವಿಖ್ಯಾತ ಮೈಸೂರು ದಸರಾಗೆ ಸೆಪ್ಟೆಂಬರ್ 26ರಿಂದ ಚಾಲನೆ ಸಿಗಲಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಇದರ ಉದ್ಘಾಟನೆ ನೆರವೇರಿಸಲಿದ್ದಾರೆ. ಇದರ ಮಧ್ಯೆ ಅರಮನೆಯಲ್ಲೂ ಕೆಲವೊಂದು ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 20ರವರೆಗೆ ವಿವಿಧ ದಿನಾಂಕಗಳಂದು ಐದು ದಿನಗಳ ಕಾಲ ಸಾರ್ವಜನಿಕರಿಗೆ ಅರಮನೆ ಪ್ರವೇಶ ಇರುವುದಿಲ್ಲ.

ಸೆಪ್ಟಂಬರ್ 20 ರಂದು ಶರನ್ನವರಾತ್ರಿ ಪ್ರಯುಕ್ತ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದ್ದು, ಈ ಹಿನ್ನಲೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.

ಅದೇ ರೀತಿ ಸೆಪ್ಟೆಂಬರ್ 26ರಂದು ಖಾಸಗಿ ದರ್ಬಾರ್ ಆರಂಭವಾಗುವ ನಿಮಿತ್ತ ಬೆಳಗ್ಗೆ 10 ಗಂಟೆಯಿಂದ ಒಂದು ಗಂಟೆಯವರೆಗೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದ್ದು, ಅಕ್ಟೋಬರ್ 4ರಂದು ಆಯುಧ ಪೂಜೆ ನಿಮಿತ್ತ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಪ್ರವೇಶವಿರುವುದಿಲ್ಲ.

ಇನ್ನು ಅಕ್ಟೋಬರ್ 5ರಂದು ವಿಜಯದಶಮಿ ಪ್ರಯುಕ್ತ ಸಾರ್ವಜನಿಕರ ಅರಮನೆ ಪ್ರವೇಶವನ್ನು ಪೂರ್ಣ ದಿನ ನಿಷೇಧಿಸಲಾಗಿದ್ದು, ಅಕ್ಟೋಬರ್ 20ರಂದು ಬೆಳಗ್ಗೆ 10 ಗಂಟೆಯಿಂದ 1 ಗಂಟೆಯವರೆಗೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments