Monday, December 5, 2022
Google search engine
HomeUncategorizedಪ್ರಭಾಸ್​ ಅಭಿನಯದ ‘ಸಾಹೋ’ ಚಿತ್ರ ಟ್ರೋಲ್​: ನೆಟ್​ಫ್ಲಿಕ್ಸ್​ ವಿರುದ್ಧ ಸಿಡಿದೆದ್ದ ಅಭಿಮಾನಿಗಳಿಂದ ಬಾಯ್ಕಾಟ್

ಪ್ರಭಾಸ್​ ಅಭಿನಯದ ‘ಸಾಹೋ’ ಚಿತ್ರ ಟ್ರೋಲ್​: ನೆಟ್​ಫ್ಲಿಕ್ಸ್​ ವಿರುದ್ಧ ಸಿಡಿದೆದ್ದ ಅಭಿಮಾನಿಗಳಿಂದ ಬಾಯ್ಕಾಟ್

ಪ್ರಭಾಸ್​ ಅಭಿನಯದ ‘ಸಾಹೋ’ ಚಿತ್ರ ಟ್ರೋಲ್​: ನೆಟ್​ಫ್ಲಿಕ್ಸ್​ ವಿರುದ್ಧ ಸಿಡಿದೆದ್ದ ಅಭಿಮಾನಿಗಳಿಂದ ಬಾಯ್ಕಾಟ್

ನಟ ಪ್ರಭಾಸ್​ ಅಭಿನಯದ ‘ಸಾಹೋ’ ಚಿತ್ರದ ಕ್ಲಿಪ್ಪಿಂಗ್​ ಒಂದಕ್ಕೆ ಸಿಡಿದೆದ್ದಿರುವ ಅಭಿಮಾನಿಗಳು ಟ್ವಿಟರ್‌ನಲ್ಲಿ ‘ಅನ್‌ಸಬ್‌ಸ್ಕ್ರೈಬ್ ನೆಟ್‌ಫ್ಲಿಕ್ಸ್’ ಟ್ರೆಂಡಿಂಗ್ ಶುರು ಮಾಡಿದ್ದಾರೆ. ನೆಟ್‌ಫ್ಲಿಕ್ಸ್ ಇಂಡೋನೇಷ್ಯಾ ಖಾತೆಯಿಂದ ಹಂಚಿಕೊಂಡ ‘ಸಾಹೋ’ ಕ್ಲಿಪ್‌ನಿಂದ ಪ್ರಭಾಸ್ ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ.

ಈ ಕ್ಲಿಪ್ಪಿಂಗ್​ ಜಾಗತಿಕವಾಗಿ ಟ್ರೋಲಿಂಗ್‌ಗೆ ಒಳಗಾದ ಬಳಿಕ ಇಂಥದ್ದೊಂದು ಟ್ರೆಂಡಿಂಗ್​ ಶುರುವಾಗಿದೆ. ಅಷ್ಟಕ್ಕೂ ಈ ಕ್ಲಿಪ್ಪಿಂಗ್​ನಲ್ಲಿ ಇರುವುದು ಏನೆಂದರೆ, ನಾಯಕ ಪ್ರಭಾಸ್ ಸ್ಕೈಡೈವಿಂಗ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಅಲ್ಲಿ ನಾಯಕ ಬಂಡೆಯಿಂದ ಒಂದು ಚೀಲವನ್ನು ಕೆಳಕ್ಕೆ ಎಸೆಯುತ್ತಾರೆ ನಂತರ ಧುಮುಕಿ ಆ ಚೀಲವನ್ನು ಹಿಡಿದುಕೊಳ್ಳುತ್ತಾರೆ, ನಂತರ ಆ ಚೀಲವು ಪ್ಯಾರಾಚೂಟ್​ ರೂಪದಲ್ಲಿ ತೆರೆದುಕೊಳ್ಳುತ್ತದೆ. ಈ ಮೂಲಕ ನಾಯಕ ಕೆಳಗೆ ಇಳಿಯುವಲ್ಲಿ ಯಶಸ್ವಿಯಾಗುತ್ತಾನೆ.

ಈ ವಿಡಿಯೋ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದು, ಇದೆಂಥ ವಿಚಿತ್ರನಪ್ಪ ಎಂದು ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ನಾಯಕನನ್ನು ಈ ರೀತಿ ವಿಚಿತ್ರವಾಗಿ ತೋರಿಸಲಾಗಿದೆ ಎಂದು ಜನರು ನಗುತ್ತಿದ್ದಾರೆ. ಈ ಮೂಲಕ ತಮ್ಮ ನಾಯಕನಿಗೆ ನೆಟ್​ ಫ್ಲಿಕ್ಸ್​ ಅವಮಾನ ಮಾಡಿದೆ ಎಂದು ಅಭಿಮಾನಿಗಳು ಅದನ್ನು ಬಾಯ್ಕಾಟ್​ ಮಾಡಲು ಶುರು ಮಾಡಿಕೊಂಡಿದ್ದಾರೆ.

ಅಂದಹಾಗೆ ಸಾಹೋದ ಕಥಾವಸ್ತು ಪೊಲೀಸ್‌ ಇಲಾಖೆ ಮತ್ತು ಭೂಗತ ಜಗತ್ತಿನ ಡಾನ್‌ಗಳ ನಡುವಿನ ಕಣ್ಣಾ ಮುಚ್ಚಾಲೆ ಆಟ. ಈ ಸ್ಟೋರಿಯಲ್ಲಿ ನಟ ಪ್ರಭಾಸ್‌ ಪೊಲೀಸನೋ ಅಥವಾ ಕಳ್ಳನೋ ಎನ್ನುವುದೇ ಚಿತ್ರದ ಮೇಜರ್‌ ಟ್ವಿಸ್ಟ್‌.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments