Thursday, August 11, 2022
Google search engine
HomeUncategorizedಪ್ರಧಾನಿ ಮೋದಿ ಅವರ ಸಲಹೆ ಬೆನ್ನಲ್ಲೇ ಈ ಕೆಲಸ ಆರಂಭಿಸಿದ RJD ನಾಯಕ್ ತೇಜಸ್ವಿ ಯಾದವ್

ಪ್ರಧಾನಿ ಮೋದಿ ಅವರ ಸಲಹೆ ಬೆನ್ನಲ್ಲೇ ಈ ಕೆಲಸ ಆರಂಭಿಸಿದ RJD ನಾಯಕ್ ತೇಜಸ್ವಿ ಯಾದವ್

ಪ್ರಧಾನಿ ಮೋದಿ ಅವರ ಸಲಹೆ ಬೆನ್ನಲ್ಲೇ ಈ ಕೆಲಸ ಆರಂಭಿಸಿದ RJD ನಾಯಕ್ ತೇಜಸ್ವಿ ಯಾದವ್

ಪ್ರಧಾನಿ ನರೇಂದ್ರ ಮೋದಿಯವರು, ಜುಲೈ 12ರಂದು ಬಿಹಾರಕ್ಕೆ ಭೇಟಿ ನೀಡಿದ್ದ ವೇಳೆ ರಾಷ್ಟ್ರೀಯ ಜನತಾದಳದ ನಾಯಕ ತೇಜಸ್ವಿ ಯಾದವ್ ಅವರಿಗೆ ತೂಕ ಕಡಿಮೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ಇದೀಗ ತೇಜಸ್ವಿ ಯಾದವ್ ಈ ಸಲಹೆಯನ್ನು ಪಾಲಿಸಲು ಮುಂದಾದಂತೆ ಕಾಣುತ್ತಿದೆ.

ವಾರದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯನ್ನು ತೇಜಸ್ವಿ ಯಾದವ್ ಅನುಷ್ಠಾನಗೊಳಿಸಿದ್ದು, ಇದಕ್ಕೆ ಉದಾಹರಣೆ ಎಂಬಂತೆ ತಮ್ಮ ನಿವಾಸದ ಮುಂದೆ ಭರ್ಜರಿಯಾಗಿ ಕ್ರಿಕೆಟ್ ಆಡಿದ್ದಾರೆ. ಈ ಮೂಲಕ ಅವರು ಬೆವರಿಳಿಸಿದ್ದು, ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಾಕಿಕೊಂಡಿದ್ದಾರೆ.

ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡಿದ ತೇಜಸ್ವಿ ಯಾದವ್ ಅವರಿಗೆ ಕಾರು ಚಾಲಕ, ಅಡುಗೆ ಕೆಲಸಗಾರ ಮೊದಲಾದವರು ಸಾಥ್ ನೀಡಿದ್ದಾರೆ. ತಾವು ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ಹಾಕಿಕೊಂಡಿರುವ ತೇಜಸ್ವಿ ಯಾದವ್ ಜೀವನವಿರಲಿ ಅಥವಾ ಆಟವಿರಲಿ ಗೆಲುವಿಗಾಗಿ ಹೋರಾಟ ಎಂದು ಬರೆದುಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments