Saturday, November 26, 2022
Google search engine
HomeUncategorizedಪಿಸ್ತೂಲ್​ನಿಂದ ಎದೆಗೆ ಗುಂಡು ಹಾರಿಸಿಕೊಂಡು ನೌಕಾಪಡೆ ನಾವಿಕನ ಆತ್ಮಹತ್ಯೆ

ಪಿಸ್ತೂಲ್​ನಿಂದ ಎದೆಗೆ ಗುಂಡು ಹಾರಿಸಿಕೊಂಡು ನೌಕಾಪಡೆ ನಾವಿಕನ ಆತ್ಮಹತ್ಯೆ

ಪಿಸ್ತೂಲ್​ನಿಂದ ಎದೆಗೆ ಗುಂಡು ಹಾರಿಸಿಕೊಂಡು ನೌಕಾಪಡೆ ನಾವಿಕನ ಆತ್ಮಹತ್ಯೆ

ಮುಂಬೈ: ಸುಮಾರು 25 ವರ್ಷದ ಭಾರತೀಯ ನೌಕಾಪಡೆಯ ನಾವಿಕ ಮುಂಬೈ ಬಂದರಿನಲ್ಲಿ ಹಡಗಿನಲ್ಲಿ ತನ್ನ ಸರ್ವಿಸ್ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾವಿಕನು ಹಡಗಿನಲ್ಲಿ ಪ್ರತ್ಯೇಕವಾದ ಕಂಪಾರ್ಟ್‌ಮೆಂಟ್‌ಗೆ ಹೋಗಿ ತನ್ನ 9 ಎಂಎಂ ಸರ್ವಿಸ್ ಪಿಸ್ತೂಲ್‌ನಿಂದ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಚೆನ್ನೈನಲ್ಲಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಆತ್ಮಹತ್ಯೆಯ ಹಿಂದಿನ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ, ಆದರೆ ಇವರು ಕೌಟುಂಬಿಕ ಸಮಸ್ಯೆಗಳಿಂದ ತೀವ್ರ ನೊಂದು ಈ ಕ್ರಮ ತೆಗೆದುಕೊಂಡಿರಬಹುದು ಎಂದು ಊಹಿಸಲಾಗಿದೆ. ನೌಕಾಪಡೆಯು ಘಟನೆಯ ಕುರಿತು ತನಿಖೆಗೆ ಆದೇಶಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments