Thursday, August 11, 2022
Google search engine
HomeUncategorizedಪಾರ್ಟಿಗೆ ಹೋದಾಗಲೇ ಹೆಂಡತಿ ಮುಂದೆ ಅವಮಾನ, ಸಿಟ್ಟಿಗೆದ್ದ ರೌಡಿಶೀಟರ್ ನಿಂದ ಅಪ್ರಾಪ್ತನ ಹತ್ಯೆ

ಪಾರ್ಟಿಗೆ ಹೋದಾಗಲೇ ಹೆಂಡತಿ ಮುಂದೆ ಅವಮಾನ, ಸಿಟ್ಟಿಗೆದ್ದ ರೌಡಿಶೀಟರ್ ನಿಂದ ಅಪ್ರಾಪ್ತನ ಹತ್ಯೆ

ಪಾರ್ಟಿಗೆ ಹೋದಾಗಲೇ ಹೆಂಡತಿ ಮುಂದೆ ಅವಮಾನ, ಸಿಟ್ಟಿಗೆದ್ದ ರೌಡಿಶೀಟರ್ ನಿಂದ ಅಪ್ರಾಪ್ತನ ಹತ್ಯೆ

ಹಾಸನ: ಕೈ ಟಚ್ ಆಗಿದ್ದಕ್ಕೆ ಮತ್ತು ಪತ್ನಿ ಮುಂದೆ ಅವಮಾನವಾಗಿದ್ದಕ್ಕೆ ಅಪ್ರಾಪ್ತನನ್ನು ಹತ್ಯೆ ಮಾಡಿದ ಘಟನೆ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಹಾಸನದ ಬಿಟ್ಟಗೌಡನಹಳ್ಳಿಯ ವಿನಯ್(17) ಕೊಲೆಯಾದ ಬಾಲಕ. ಗೆಳೆಯರು ಕರೆದಿದ್ದರೆಂದು ವಿನಯ್ ಪಾರ್ಟಿಗೆ ಹೋಗಿದ್ದಾನೆ. ಪಾರ್ಟಿ ಮುಗಿಸಿ ಲಿಫ್ಟ್ ನಲ್ಲಿ ಕೆಳಗಿಳಿಯುವ ವೇಳೆ ಅದೇ ಲಿಫ್ಟ್ ನಲ್ಲಿ ರೌಡಿ ಶೀಟರ್ ರಾಕೇಶ್ ಕೂಡ ಇದ್ದ. ಈ ವೇಳೆ ವಿನಯ್ ಕೈ ರಾಕೇಶ್ ನ ಪತ್ನಿಗೆ ಟಚ್ ಆಗಿದ್ದು, ರಾಕೇಶ್ ಜಗಳ ತೆಗೆದಿದ್ದಾನೆ. ಆಗ ವಿನಯ್ ನಾವು ಏನ್ ಮಾಡೋಕು ರೆಡಿ ಚುಚ್ಚುತ್ತೇನೆ ಎಂದು ಆವಾಜ್ ಹಾಕಿದ್ದಾನೆ. ಪತ್ನಿ ಎದುರು ಅವಮಾನವಾಗಿದ್ದರಿಂದ ಭಾನುವಾರ ಸಹಚರರ ಮೂಲಕ ವಿನಯ್ ನನ್ನು ಕರೆಸಿಕೊಂಡ ರಾಕೇಶ್ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಥಳಿಸಿದ್ದ ಬಗ್ಗೆ ವಿನಯ್ ತಾಯಿಗೆ ಕರೆ ಮಾಡಿ ತಿಳಿಸಿದ್ದಾನೆ. ಏನ್ ಮಾಡ್ತಿರೋ ಮಾಡ್ಕೊಳ್ಳಿ ಎಂದು ಬೆದರಿಸಿದ್ದಾರೆ.

ಹಲ್ಲೆಯಿಂದ ಮೃತಪಟ್ಟಿದ್ದ ವಿನಯ್ ಶವವನ್ನು ಶಿರಾಡಿ ಘಾಟ್ ಪ್ರಪಾತಕ್ಕೆ ಎಸೆದಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟ್ ಪ್ರಪಾತದಲ್ಲಿ ಮೃತದೇಹ ಪತ್ತೆಯಾಗಿತ್ತು. ಹಾಸನದಲ್ಲಿ ಕೊಲೆ ಮಾಡಿ 80 ಕಿಲೋಮೀಟರ್ ಶವ ಸಾಗಿಸಿ ಎಸೆಯಲಾಗಿತ್ತು. ಶಿರಾಡಿ ಘಾಟ್ ಜಲಪಾತದಲ್ಲಿ ವಿನಯ್ ಮೃತ ದೇಹವನ್ನು ಹಂತಕರು ಎಸೆದಿದ್ದರು. ನಿನ್ನೆಯಿಂದ ಶೋಧ ನಡೆಸುತ್ತಿದ್ದ ಪೊಲೀಸರಿಗೆ ವಿನಯ್ ಮೃತ ದೇಹ ಕಂಡು ಬಂದಿತ್ತು. ಶವ ಪತ್ತೆಯಾದ ಸ್ಥಳಕ್ಕೆ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ರೌಡಿಶೀಟರ್ ರಾಕೇಶ್ ಮತ್ತು ವಿನಯ್ ನಡುವೆ ಜಗಳವಾಗಿತ್ತು. ಲಿಫ್ಟ್ ನಲ್ಲಿ ಕೆಳಗಿಳಿಯುವ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಪತ್ನಿ ಎದುರಲ್ಲೇ ವಿನಯ್ ಆವಾಜ್ ಹಾಕಿದ್ದನೆಂದು ಮರುದಿನ ಬಾಲಕ ವಿನಯ್ ಮೇಲೆ ಹಲ್ಲೆ ನಡೆಸಿ ಕೊಲೆಗೈದು ಶವ ಎಸೆದಿದ್ದರು.

ವಿನಯ್ ಕಾಣೆಯಾಗಿದ್ದಾನೆ ಎಂದು ಆತನ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಬ್ ನಲ್ಲಿ ಗಲಾಟೆ ಮಾಡಿದ್ದವರನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದರು. ರೌಡಿಶೀಟರ್ ರಾಕೇಶ್ ಸೇರಿದಂತೆ 8 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆಯ ಸಂದರ್ಭದಲ್ಲಿ ವಿನಯ್ ಕೊಲೆ ಮಾಡಿದ ಬಗ್ಗೆ ಆರೋಪಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments