Friday, October 7, 2022
Google search engine
HomeUncategorizedಪಾಕ್​ ಕ್ಯಾಚ್​ ಬಿಟ್ಟಿದ್ದೇ ಸಂಚಾರಿ ಪೊಲೀಸರ ಜಾಗೃತಿ ಪೋಸ್ಟ್….​!

ಪಾಕ್​ ಕ್ಯಾಚ್​ ಬಿಟ್ಟಿದ್ದೇ ಸಂಚಾರಿ ಪೊಲೀಸರ ಜಾಗೃತಿ ಪೋಸ್ಟ್….​!

ಪಾಕ್​ ಕ್ಯಾಚ್​ ಬಿಟ್ಟಿದ್ದೇ ಸಂಚಾರಿ ಪೊಲೀಸರ ಜಾಗೃತಿ ಪೋಸ್ಟ್….​!

ಪೊಲೀಸರು ಜನ ಜಾಗೃತಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಸರತ್ತು ಮಾಡುತ್ತಿರುತ್ತಾರೆ. ಬಾಲಿವುಡ್​ ಚಲನಚಿತ್ರಗಳಲ್ಲಿನ ಅಂಶಗಳನ್ನು ಹೆಕ್ಕಿ ತೆಗೆದು ಮೀಮ್​ ಗಳಾಗಿ ಬಳಸುತ್ತಿವೆ.

ಇದೀಗ ದೆಹಲಿ ಪೊಲೀಸರ ಅಧಿಕೃತ ಟ್ವಿಟರ್​ ಹ್ಯಾಂಡಲ್​ನಿಂದ ಹಂಚಿಕೊಂಡ ಪೋಸ್ಟ್​ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ.

ಈ ಪೋಸ್ಟ್​ ರಸ್ತೆ ಸುರಕ್ಷತೆಯ ಬಗ್ಗೆ ತಿಳಿಸಿಕೊಡುತ್ತದೆ. ಭಾನುವಾರ ನಡೆದ ಏಷ್ಯಾ ಕಪ್​ ಫೈನಲ್​ನಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನದ ನಡುವೆ ನಡೆದ ರೋಮಾಂಚಕ ಆಟದ ಒಂದು ಸಂದರ್ಭವನ್ನು ಬಳಸಿಕೊಳ್ಳಲಾಗಿದೆ.

ಭಾನುಕಾ ರಾಜಪಕ್ಸೆ ಹೊಡೆದ ಚೆಂಡನ್ನು ಹಿಡಿಯಲು ಪ್ರಯತ್ನಿಸುವಾಗ ಶಾದಾಬ್​ ಖಾನ್​ ಮತ್ತು ಆಸಿಫ್​ ಅಲಿ ನಡುವೆ ಸಂಭವಿಸಿದ ಡಿಕ್ಕಿಯನ್ನು ಪೊಲೀಸ್​ ಇಲಾಖೆ ಜಾಣತನದಿಂದ ಬಳಸಿಕೊಂಡಿದೆ. ಮನ್ನಾ ಡೇ ಅವರ ಆಯೆ ಭಾಯಿ ಜರಾ ದೇಖ್​ ಕೆ ಚಲೋ…… ಹಾಡು ಹಿನ್ನಲೆಯಲ್ಲಿ ಪ್ಲೇ ಮಾಡಲಾಗಿದೆ.

“ಏ ಭಾಯಿ, ಜರಾ ದೇಖ್​ ಕೆ ಚಲೋ,” ರಸ್ತೆ ಸುರಕ್ಷತೆ ಮತ್ತು ಏಷ್ಯಾ ಕಪ್​ ಫೈನಲ್​ 2022 ರ ಹ್ಯಾಶ್​ಟ್ಯಾಗ್​ಗಳೊಂದಿಗೆ ಪೋಸ್ಟ್​ನ ಶೀರ್ಷಿಕೆಯಾಗಿದೆ.

ಈ ವಿಡಿಯೊವನ್ನು ಸುಮಾರು 3 ಲಕ್ಷ ಮಂದಿ ವೀಕ್ಷಿಸಿದ್ದು, ಸ್ವಾರಸ್ಯಕರ ಕಾಮೆಂಟ್​ ಬಂದಿದೆ. “ದೆಹಲಿ ಪೊಲೀಸ್ ರಾಕ್ಸ್​” ಎಂದು ಒಬ್ಬರು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments