Friday, March 24, 2023
Google search engine
HomeUncategorizedಪಾಕಿಸ್ತಾನಿಯೊಬ್ಬನ ಒಳ್ಳೆ ಮನಸ್ಸಿನ ವಿಡಿಯೋ ಶೇರ್​ ಮಾಡಿದ ನಿರ್ಮಾಪಕ ವಿನೋದ್​ ಕಪ್ರಿ

ಪಾಕಿಸ್ತಾನಿಯೊಬ್ಬನ ಒಳ್ಳೆ ಮನಸ್ಸಿನ ವಿಡಿಯೋ ಶೇರ್​ ಮಾಡಿದ ನಿರ್ಮಾಪಕ ವಿನೋದ್​ ಕಪ್ರಿ

ಪಾಕಿಸ್ತಾನಿಯೊಬ್ಬನ ಒಳ್ಳೆ ಮನಸ್ಸಿನ ವಿಡಿಯೋ ಶೇರ್​ ಮಾಡಿದ ನಿರ್ಮಾಪಕ ವಿನೋದ್​ ಕಪ್ರಿ

ಚಲನಚಿತ್ರ ನಿರ್ಮಾಪಕ ವಿನೋದ್ ಕಪ್ರಿ ಅವರು ಕೆಲವು ಹೃದಯಸ್ಪರ್ಶಿ ಮತ್ತು ಅದ್ಭುತ ಕಥೆಗಳನ್ನು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅಂಥ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ.

ಪಾಕಿಸ್ತಾನದಲ್ಲಿ ತಮಗಾಗಿರುವ ಸಿಹಿ ಘಟನೆಯೊಂದನ್ನು ಅವರು ಉಲ್ಲೇಖಿಸಿದ್ದಾರೆ. ಮೂಲತಃ ಫರೀದ್ ಖಾನ್ ಅವರು ಹಂಚಿಕೊಂಡಿರುವ ಪೋಸ್ಟ್ ಒಂದನ್ನು ಶೇರ್​ ಮಾಡಿಕೊಂಡಿರುವ ಕಪ್ರಿ ಅವರು, ಅದರಲ್ಲಿ ಇದೇ ರೀತಿ ತಮಗೆ ಆಗಿರುವ ಅನುಭವವನ್ನೂ ಹಂಚಿಕೊಂಡಿದ್ದಾರೆ.

ಫರೀದ್​ ಖಾನ್​ ಅವರು ಶೇರ್ ಮಾಡಿರುವ ವಿಡಿಯೋದಲ್ಲಿ ಕಿತ್ತಳೆ ಹಣ್ಣುಗಳನ್ನು ಮಾರಾಟ ಮಾಡುವ ವ್ಯಕ್ತಿಯ ಮುಂದೆ ಪ್ರವಾಸಿಗರೊಬ್ಬರು ನಿಂತಿರುವುದನ್ನು ನೋಡಬಹುದು. ಆತ ಅಂಗಡಿಯವನಿಗೆ ಹಣ್ಣಿನ ಹಣವನ್ನು ನೀಡಲು ಪ್ರಯತ್ನಿಸಿದಾಗ, ಆತ ನಿರಾಕರಿಸುತ್ತಾನೆ. ಬೇರೆ ದೇಶದ ವ್ಯಕ್ತಿ ನಮ್ಮ ಅತಿಥಿ. ಆದ್ದರಿಂದ ಹಣ ತೆಗೆದುಕೊಳ್ಳುವುದಿಲ್ಲ ಎನ್ನುತ್ತಾನೆ.

ಇದನ್ನು ಶೇರ್​ ಮಾಡಿಕೊಂಡಿರುವ ಕಪ್ರಿ, ಕರಾಚಿಗೆ ತಾವು ಭೇಟಿ ನೀಡಿದಾಗ ಅಂತಹ ಅನುಭವ ಆಗಿದ್ದನ್ನು ಬರೆದುಕೊಂಡಿದ್ದಾರೆ. “ಇದೇ ರೀತಿಯ ಘಟನೆ ನನ್ನೊಂದಿಗೆ ಕರಾಚಿಯಲ್ಲೂ ನಡೆದಿದೆ. ಅಂಗಡಿಯಾತ ನಾನು ಭಾರತದಿಂದ ಬಂದವನು ಎಂದು ತಿಳಿದ ಆತ ಮೊದಲು ಲಸ್ಸಿಗೆ ಆರ್ಡರ್ ಮಾಡಿ ನಂತರ ಶಾಪಿಂಗ್ ಮಾಡಿದ ನಂತರ ಹಣ ಸ್ವೀಕರಿಸಲು ನಿರಾಕರಿಸಿದರು ಎಂದಿದ್ದಾರೆ. ಇದರ ಪರ-ವಿರೋಧದ ಕಮೆಂಟ್​ಗಳು ಬಂದಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments