Saturday, November 26, 2022
Google search engine
HomeUncategorizedಪಾಕಿಸ್ತಾನದಲ್ಲಿ ಮತ್ತೊಂದು ಡಿಫರೆಂಟ್‌ ಲವ್‌ ಸ್ಟೋರಿ….! 52ರ ಅಧ್ಯಾಪಕನನ್ನೇ ಮದುವೆಯಾಗಿದ್ದಾಳೆ 20 ವರ್ಷದ ವಿದ್ಯಾರ್ಥಿನಿ

ಪಾಕಿಸ್ತಾನದಲ್ಲಿ ಮತ್ತೊಂದು ಡಿಫರೆಂಟ್‌ ಲವ್‌ ಸ್ಟೋರಿ….! 52ರ ಅಧ್ಯಾಪಕನನ್ನೇ ಮದುವೆಯಾಗಿದ್ದಾಳೆ 20 ವರ್ಷದ ವಿದ್ಯಾರ್ಥಿನಿ

ಪಾಕಿಸ್ತಾನದಲ್ಲಿ ಮತ್ತೊಂದು ಡಿಫರೆಂಟ್‌ ಲವ್‌ ಸ್ಟೋರಿ….! 52ರ ಅಧ್ಯಾಪಕನನ್ನೇ ಮದುವೆಯಾಗಿದ್ದಾಳೆ 20 ವರ್ಷದ ವಿದ್ಯಾರ್ಥಿನಿ

ಪ್ರೀತಿಗೆ ವಯಸ್ಸಿನ ಹಂಗಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಪಾಕಿಸ್ತಾನದಲ್ಲಿ 20 ವರ್ಷದ ವಿದ್ಯಾರ್ಥಿನಿಯೊಬ್ಬಳು 52 ವರ್ಷದ ಶಿಕ್ಷಕನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಪದವಿಪೂರ್ವ ವಿದ್ಯಾರ್ಥಿನಿಯಾಗಿರುವ ಜೋಯಾ ನೂರ್, ತನ್ನ ಶಿಕ್ಷಕ ಸಾಜಿದ್ ಅಲಿಯನ್ನು ವರಿಸಿದ್ದು, ಈ ವಿಶಿಷ್ಟ ಪ್ರೇಮಕಥೆ ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಯುಟ್ಯೂಬರ್‌ ಸೈಯದ್ ಬಸಿತ್ ಅಲಿ ಜೊತೆಗೆ ಈ ಜೋಡಿ ತಮ್ಮ ಲವ್‌ ಸ್ಟೋರಿಯನ್ನು ಹಂಚಿಕೊಂಡಿದ್ದಾಳೆ.

20 ವರ್ಷದ ಜೋಯಾಗೆ ಶಿಕ್ಷಕ ಸಾಜಿದ್‌ ಅಲಿಯ ವ್ಯಕ್ತಿತ್ವ ಇಷ್ಟವಾಗಿತ್ತಂತೆ. ತನ್ನನ್ನು ಮದುವೆಯಾಗುವಂತೆ ಆಕೆ ಪ್ರಪೋಸ್‌ ಮಾಡಿದ್ದಾಳೆ. ಆದ್ರೆ ಇಬ್ಬರ ಮಧ್ಯೆ 32 ವರ್ಷಗಳ ಅಂತರವಿದ್ದಿದ್ದರಿಂದ ಸಾಜಿದ್‌ ಮದುವೆಗೆ ಒಪ್ಪಿಲ್ಲ. ಈ ಬಗ್ಗೆ ಗಟ್ಟಿ ನಿರ್ಧಾರಕ್ಕೆ ಬರಲು ಒಂದು ವಾರ ಕಾಲಾವಕಾಶ ಕೇಳಿದ್ದಾನೆ ಸೈಯದ್‌.

ಈ ಸಮಯದಲ್ಲಿ ಆತನಿಗೂ ಜೋಯಾ ನೂರ್‌ ಮೇಲೆ ಪ್ರೀತಿ ಮೂಡಿದೆ. ಆದ್ರೆ ಇವರ ಮದುವೆಗೆ ಸಂಬಂಧಿಕರು ಹಾಗೂ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದ್ರೆ ಜೋಯಾ ಹಾಗೂ ಸಾಜಿದ್‌ ಇದಕ್ಕೆ ಸೊಪ್ಪು ಹಾಕಿಲ್ಲ.

ಸಾಜಿದ್‌ ಪಾಠ ಮಾಡುವ ಶೈಲಿಯನ್ನು ಜೋಯಾ ಇಷ್ಟಪಟ್ಟಿದ್ದಾಳಂತೆ. ಸಾಜಿದ್‌ಗೆ ಪತ್ನಿ ಮಾಡುವ ಅಡುಗೆ ಮತ್ತು ಚಹಾ ಫೇವರಿಟ್‌. ಸದ್ಯ ಜೋಯಾ ಕೂಡ ಕೆಲಸ ಮಾಡುತ್ತಿದ್ದು, ಇಬ್ಬರೂ ಸೇರಿ ಪ್ರತಿತಿಂಗಳು ಲಕ್ಷ ರೂಪಾಯಿಗೂ ಅಧಿಕ ಆದಾಯ ಕೂಡ ಗಳಿಸುತ್ತಿದ್ದಾರೆ. ಮನೆಯವರ ವಿರೋಧದ ನಡುವೆಯೂ ಮದುವೆಯಾಗಿರುವ ಈ ಅಪರೂಪದ ಜೋಡಿಗಳು ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ಪಾಕಿಸ್ತಾನದಲ್ಲಿ ಇತ್ತೀಚೆಗಷ್ಟೆ 55 ವರ್ಷದ ವ್ಯಕ್ತಿಯೊಬ್ಬ 18 ವರ್ಷದ ಯುವತಿಯನ್ನು ಮದುವೆಯಾಗಿದ್ದ. ಇಬ್ಬರೂ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದು, ಈ ಲವ್‌ ಸ್ಟೋರಿ ಕೂಡ ವೈರಲ್‌ ಆಗಿತ್ತು.

 

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments