Monday, December 5, 2022
Google search engine
HomeUncategorizedಪರಿಶಿಷ್ಟ ಮಹಿಳೆ ನೀರು ಕುಡಿದರೆಂಬ ಕಾರಣಕ್ಕೆ ಗೋ ಮೂತ್ರದಿಂದ ಟ್ಯಾಂಕ್ ಶುದ್ಧೀಕರಣ…!

ಪರಿಶಿಷ್ಟ ಮಹಿಳೆ ನೀರು ಕುಡಿದರೆಂಬ ಕಾರಣಕ್ಕೆ ಗೋ ಮೂತ್ರದಿಂದ ಟ್ಯಾಂಕ್ ಶುದ್ಧೀಕರಣ…!

ಪರಿಶಿಷ್ಟ ಮಹಿಳೆ ನೀರು ಕುಡಿದರೆಂಬ ಕಾರಣಕ್ಕೆ ಗೋ ಮೂತ್ರದಿಂದ ಟ್ಯಾಂಕ್ ಶುದ್ಧೀಕರಣ…!

ದೇಶದಲ್ಲಿ ಜಾತಿ ವ್ಯವಸ್ಥೆ ಇನ್ನೂ ತಾಂಡವವಾಡುತ್ತಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ. ಪರಿಶಿಷ್ಟ ಜಾತಿ ಮಹಿಳೆಯೊಬ್ಬರು ಕಿರು ನೀರು ಸರಬರಾಜು ಟ್ಯಾಂಕಿನ ನಲ್ಲಿಯಿಂದ ನೀರು ಕುಡಿದರೆಂಬ ಕಾರಣಕ್ಕೆ ಸಂಪೂರ್ಣ ಟ್ಯಾಂಕ್ ಖಾಲಿ ಮಾಡಿ ಬಳಿಕ ಅದನ್ನು ಗೋಮೂತ್ರದಿಂದ ಶುದ್ಧೀಕರಿಸಲಾಗಿದೆ. ಇಂಥದೊಂದು ಆಘಾತಕಾರಿ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಪ್ರಕರಣದ ವಿವರ: ಚಾಮರಾಜನಗರ ತಾಲೂಕಿನ ಹೆಗ್ಗೋಠಾರಾ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದ ಯುವಕನ ಮದುವೆ ಇದ್ದು, ಶುಕ್ರವಾರದಂದು ಈ ಮದುವೆಗೆ ಆಗಮಿಸಿದ್ದ ವಧುವಿನ ಕಡೆಯ ಮಹಿಳೆಯೊಬ್ಬರು ಊಟದ ಬಳಿಕ ಗ್ರಾಮದ ಹಳೆ ಮಾರಿಗುಡಿ ಬಳಿ ಲಿಂಗಾಯಿತರ ಬೀದಿಯಲ್ಲಿರುವ ಟ್ಯಾಂಕಿನ ನಲ್ಲಿಯಲ್ಲಿ ನೀರು ಕುಡಿದಿದ್ದರು.

ಇದು ತಿಳಿಯುತ್ತಿದ್ದಂತೆ ಸ್ಥಳೀಯರು ನೀರು ಕುಡಿದ ಮಹಿಳೆಗೆ ಬೈದಿದ್ದಲ್ಲದೆ ಬಳಿಕ ಸಂಪೂರ್ಣ ಟ್ಯಾಂಕ್ ಖಾಲಿ ಮಾಡಿ ಗೋಮೂತ್ರದಿಂದ ಸ್ವಚ್ಛಗೊಳಿಸಿದ್ದಾರೆ. ಇದರ ವಿಡಿಯೋವನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ವೈರಲ್ ಆಗಿದೆ. ಇದೀಗ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಘಟನೆ ನಡೆದಿರುವುದನ್ನು ಸ್ಥಳದಲ್ಲಿದ್ದವರು ಖಚಿತಪಡಿಸಿದ್ದಾರೆ. ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್ ಬಸವರಾಜ್, ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments