Tuesday, September 27, 2022
Google search engine
HomeUncategorizedಪರಸ್ಪರ ಟಕ್ಕರ್‌ ಕೊಡ್ತಿವೆ ಹೋಂಡಾ ಹಾಗೂ ಬಜಾಜ್‌ ಬೈಕ್‌ಗಳು; ಇಲ್ಲಿದೆ ಅವುಗಳ ವಿಶೇಷತೆ…!

ಪರಸ್ಪರ ಟಕ್ಕರ್‌ ಕೊಡ್ತಿವೆ ಹೋಂಡಾ ಹಾಗೂ ಬಜಾಜ್‌ ಬೈಕ್‌ಗಳು; ಇಲ್ಲಿದೆ ಅವುಗಳ ವಿಶೇಷತೆ…!

ಪರಸ್ಪರ ಟಕ್ಕರ್‌ ಕೊಡ್ತಿವೆ ಹೋಂಡಾ ಹಾಗೂ ಬಜಾಜ್‌ ಬೈಕ್‌ಗಳು; ಇಲ್ಲಿದೆ ಅವುಗಳ ವಿಶೇಷತೆ…!

ಹೋಂಡಾ ಕಂಪನಿ ಇತ್ತೀಚೆಗಷ್ಟೆ CB300F ಮೋಟಾರ್‌ ಸೈಕಲ್‌ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬಿಗ್‌ವಿಂಗ್‌ ಡೀಲರ್‌ಶಿಪ್‌ ಮೂಲಕ ಇದನ್ನು ಮಾರಾಟ ಮಾಡಲಾಗ್ತಿದೆ. CB400F ಮೋಟಾರ್‌ ಸೈಕಲ್‌ಗೆ ಬಜಾಜ್‌ ಡೊಮಿನರ್‌ 400 ಸಖತ್‌ ಪೈಪೋಟಿ ಕೊಡ್ತಾ ಇದೆ.

ಎರಡೂ ಬೈಕ್‌ಗಳು ಬೇರೆ ಬೇರೆ ಕಂಪನಿಯವಾಗಿದ್ದರೂ ಬೆಲೆ ಮಾತ್ರ ಬಹುತೇಕ ಸರಿಸಮನಾಗಿಯೇ ಇದೆ. CB300F ಮೋಟಾರ್‌ ಸೈಕಲ್‌ ನಿಖರ ಸ್ಟ್ರೀಟ್‌ ಫೈಟರ್‌ನಂತೆ ಕಾಣಿಸುತ್ತೆ. ಎಲ್‌ಇಡಿ ಹೆಡ್‌ ಲ್ಯಾಂಪ್‌, ಸುಂದರವಾದ ಫ್ಯೂಯೆಲ್‌ ಟ್ಯಾಂಕ್‌ ಇದರ ವಿಶೇಷತೆ.

ದಿ ಡೊಮಿನರ್‌ 400 ಬೈಕ್‌ ಕೊಂಚ ದಪ್ಪ ಆಕಾರದಲ್ಲಿದೆ. ಡೈಮಂಡ್‌ ಕಟ್‌ ಅಲೊಯ್‌ ಚಕ್ರಗಳು ಈ ಬೈಕ್‌ನ ವಿಶೇಷತೆ. ಸುಂದರ ಹೆಡ್‌ಲ್ಯಾಂಪ್‌ಗಳು ಬೈಕ್‌ನ ಲುಕ್‌ಗೆ ಕಳಸವಿಟ್ಟಂತಿವೆ.

CB300F ಬೈಕ್‌ 293 ಸಿಸಿ ಆಯಿಲ್‌ ಕೂಲ್‌ ಎಂಜಿನ್‌ ಹೊಂದಿದೆ. 24.2 ಎಚ್‌ಪಿ ಗರಿಷ್ಠ ಪವರ್‌ ಅನ್ನು ಇದು ಉತ್ಪಾದಿಸಬಲ್ಲದು. 6 ಸ್ಪೀಡ್‌ ಗೇರ್‌ ಬಾಕ್ಸ್‌ ಅನ್ನು ಈ ಬೈಕ್‌ಗೆ ಅಳವಡಿಸಲಾಗಿದೆ.

ದಿ ಡೊಮಿನರ್‌ 400 373 ಸಿಸಿ, ಲಿಕ್ವಿಡ್‌ ಕೂಲ್‌ ಎಂಜಿನ್‌ ಅನ್ನು ಹೊಂದಿದೆ. ಇದಕ್ಕೂ ಸಹ 6 ಸ್ಪೀಡ್‌ ಗೇರ್‌ ಬಾಕ್ಸ್‌ ಇದ್ದು, 40 ಎಚ್‌ಪಿ ಪವರ್‌ ಅನ್ನು ಉತ್ಪಾದಿಸಬಲ್ಲದು. CB300F ಮೋಟಾರ್‌ ಸೈಕಲ್‌ 153 ಕೆಜಿ ತೂಕವಿದೆ. ಆದ್ರೆ ದಿ ಡೊಮಿನರ್‌ 400 ಬರೋಬ್ಬರಿ 193 ಕೆಜಿ ತೂಕ ಹೊಂದಿದೆ.  ಡೊಮಿನರ್‌ 400 ಬೈಕ್‌ನ ಬೆಲೆ 2.24 ಲಕ್ಷ ರೂಪಾಯಿಯಿಂದ ಆರಂಭವಾದ್ರೆ, CB300F ಬೈಕ್‌ನ ಆರಂಭಿಕ ಬೆಲೆ 2.26 ಲಕ್ಷ ರೂಪಾಯಿ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments