ಪಫರ್ ಜಾಕೆಟ್ ಮಡಿಸುವುದು ಹೇಗೆ ಎಂದು ಹೇಳಿಕೊಟ್ಟ ಮಹಿಳೆ; ವಿಡಿಯೋ ವೈರಲ್

ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಪರಿಣಾಮಕಾರಿಯಾಗಿ ಪ್ಯಾಕ್ ಮಾಡುವುದು ಹೇಗೆಂದು ಹೇಳಿಕೊಡುತ್ತಿದ್ದಾರೆ. ಅವಳು ಪಫರ್ ಜಾಕೆಟ್ ಅನ್ನು ಮಡಿಸುವ ಮೂಲಕ ಈ ವಿಡಿಯೋ ಪ್ರಾರಂಭಿಸುತ್ತಾರೆ. ಸಾಮಾನ್ಯವಾಗಿ ಇದರ ಪ್ಯಾಕ್ ಮಾಡುವಾಗ ಸಾಕಷ್ಟು ಜಾಗವನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಇದರ ಪ್ಯಾಕ್ ಮಾಡುವುದು ಕಷ್ಟಕರವಾದ ವಿಷಯಗಳಲ್ಲಿ ಒಂದಾಗಿದೆ.
ಆದರೆ ಮಹಿಳೆ ಕಡಿಮೆ ಜಾಗದಲ್ಲಿ ಅದನ್ನು ಹೇಗೆ ಪ್ಯಾಕ್ ಮಾಡಬಹುದು ಎನ್ನುವುದನ್ನು ತೋರಿಸಿದ್ದಾರೆ. ಬಟ್ಟೆಗಳು ಅನಿಯಮಿತ ಆಕಾರಗಳನ್ನು ಹೊಂದಿರುವ ವಸ್ತುಗಳು. ಸೂಟ್‌ಕೇಸ್‌ಗಳು ಮತ್ತು ಬ್ಯಾಗ್‌ಗಳಲ್ಲಿ ಹೊಂದಿಕೊಳ್ಳಲು ಅವುಗಳನ್ನು ವಿಶೇಷ ರೀತಿಯಲ್ಲಿ ಪ್ಯಾಕ್ ಮಾಡಬೇಕಾಗುತ್ತದೆ ಎನ್ನುತ್ತಾರೆ ಈಕೆ. ಈ ವಿಡಿಯೋ 1.6 ಮಿಲಿಯನ್ ಮಂದಿ ನೋಡಿದ್ದು ಶ್ಲಾಘಿಸಿದ್ದಾರೆ.