Thursday, February 2, 2023
Google search engine
HomeUncategorizedಪತಿ ಸ್ವೀಕರಿಸುತ್ತಿಲ್ಲವೆಂದು ಗೊಳೋ ಎಂದು ಅತ್ತ ರಾಖಿ; ವಿಡಿಯೋ ವೈರಲ್

ಪತಿ ಸ್ವೀಕರಿಸುತ್ತಿಲ್ಲವೆಂದು ಗೊಳೋ ಎಂದು ಅತ್ತ ರಾಖಿ; ವಿಡಿಯೋ ವೈರಲ್

ಪತಿ ಸ್ವೀಕರಿಸುತ್ತಿಲ್ಲವೆಂದು ಗೊಳೋ ಎಂದು ಅತ್ತ ರಾಖಿ; ವಿಡಿಯೋ ವೈರಲ್

ಬಾಲಿವುಡ್‌ ನಟಿ ರಾಖಿ ಸಾವಂತ್ ಮದುವೆಯಾಗಿದ್ದಾರೆಂಬ ಸುದ್ದಿ ಬಹಿರಂಗವಾದ ನಂತರ ಅವರ ವೈವಾಹಿಕ ಜೀವನದ ಒಂದಿಲ್ಲೊಂದು ಅಂಶಗಳು ಹೊರಬರುತ್ತಲಿವೆ. ಕರ್ನಾಟಕ ಮೂಲದ ಆದಿಲ್ ಖಾನ್ ನ ಮದುವೆ ಬಳಿಕ ರಾಖಿ ಸಾವಂತ್ ಕಣ್ಣೀರು ಹಾಕ್ತಿರುವ, ಗೋಳಾಡ್ತಿರುವ ವಿಡಿಯೋ ಹರಿದಾಡ್ತಿವೆ.

ಸಾಕಷ್ಟು ಗೊಂದಲಗಳ ನಂತರ ನಾವಿಬ್ಬರೂ ಮದುವೆಯಾಗಿದ್ದು ನಮ್ಮ ಕುಟುಂಬವು ರಾಖಿ ಸಾವಂತ್ ಳನ್ನು ಸೊಸೆ ಎಂದು ಸ್ವೀಕರಿಸ್ತಿಲ್ಲ ಎಂದು ಆದಿಲ್ ಸ್ಪಷ್ಟಪಡಿಸಿದ್ದರು. ಆದರೆ ಮತ್ತೊಂದು ವಿಡಿಯೋದಲ್ಲಿ ರಾಖಿ ಸಾವಂತ್, ಆದಿಲ್ ಜೊತೆಗಿನ ತನ್ನ ಮದುವೆಯ ಬಗ್ಗೆ ಪಾಪರಾಜಿಯೊಂದಿಗೆ ಮಾತನಾಡುತ್ತಾ, ತನ್ನ ತಾಯಿ ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳಿದ್ದಾರೆ. ತನ್ನ ವೈವಾಹಿಕ ಸಮಸ್ಯೆಗಳ ಬಗ್ಗೆ ಮಾತನಾಡುವಾಗ ಆಕೆ ಅಳುತ್ತಿರೋದು ವಿಡಿಯೋದಲ್ಲಿದೆ.

ಮತ್ತೊಂದು ವೀಡಿಯೊದಲ್ಲಿ, ರಾಖಿ ಸಾವಂತ್ ಕ್ಯಾಮೆರಾ ಪರ್ಸನ್ ಗಳ ಮುಂದೆ ಯಾರನ್ನೋ ಕರೆದು ‘ಆದಿಲ್ ತಮ್ಮ ಮದುವೆಯನ್ನು ಏಕೆ ಒಪ್ಪಿಕೊಳ್ಳುತ್ತಿಲ್ಲ’ ಎಂದು ಕೇಳುತ್ತಿರುವುದು ಕಂಡುಬಂದಿದೆ. ವಿಡಿಯೋದಲ್ಲಿ ರಾಖಿ ಆದಿಲ್‌ನೊಂದಿಗಿನ ತನ್ನ ವಿವಾಹವನ್ನು ದೃಢಪಡಿಸಿರುವುದರಿಂದ, ಎರಡನೆಯವರು ತನ್ನನ್ನು ಆದಿಲ್ ಹೆಂಡತಿಯಾಗಿ ಸ್ವೀಕರಿಸುವುದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಝೂಮ್ ಟಿವಿ ಯೊಂದಿಗೆ ಮಾತನಾಡಿದ ರಾಖಿ, ಆದಿಲ್ ನನ್ನನ್ನು ಒಪ್ಪಿಕೊಳ್ಳದಿದ್ದರೆ ಅದು ಲವ್ ಜಿಹಾದ್. ಆದಿಲ್ ನನ್ನನ್ನು ಒಪ್ಪಿಕೊಂಡರೆ ಅದು ಪ್ರೇಮವಿವಾಹ. ಅವನು ನನ್ನನ್ನು ಒಪ್ಪಿಕೊಳ್ಳುವಂತೆ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಎಲ್ಲಾ ವಿಧಿವಿಧಾನಗಳನ್ನು ಅನುಸರಿಸಿ ನಾನು ಆದಿಲ್‌ನನ್ನು ಕಾನೂನುಬದ್ಧವಾಗಿ ಮದುವೆಯಾಗಿದ್ದೇನೆ. ಆದಿಲ್ ನನ್ನನ್ನು ಒಪ್ಪಿಕೊಳ್ಳುತ್ತಾನೆ. ಇಲ್ಲದಿದ್ದರೆ ನಾನು ಸಾಯಬೇಕು ಎಂದು ರಾಖಿ ಹೇಳಿದ್ದಾಳೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments